ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆ ಇಡಬೇಕು : ಬಸವ ಭೂಷಣ ಸ್ವಾಮೀಜಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 31- ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆ ಇಡಬೇಕು ಆಗ ಮಾತ್ರ ವಿದ್ಯೆ ತಲೆಗೆ ಹತ್ತಲು ಸಾಧ್ಯವಾಗುತ್ತದೆ ಮೊಬೈಲ್ ಬಿಟ್ಟು ಪುಸ್ತಕದ ಕಡೆ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಗುರುಬಸವ ಮಠದ ಬಸವ ಭೂಷಣ ಸ್ವಾಮೀಜಿ ಹೇಳಿದರು.

ನಗರದ ಗುರುಭವನದಲ್ಲಿ ತಾಲೂಕ ಗಂಗಾಮತ ನೌಕರರ ಸಂಘದಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಿ ಆಶೀರ್ವಚನ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಇಂದಿನಿಂದಲೇ ಅಭ್ಯಾಸವನ್ನು ಮಾಡಬೇಕು ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶ ಪಡೆಯಲು ಸಾಧ್ಯ ಎಂದರು.

ಬಸವ ಬಳಗದ ಬಸವರಾಜ ಶರಣರು ಮಾತನಾಡಿದರು ತಾಲೂಕು ಗಂಗಾಮತ ನೌಕರರ ಸಂಘದ ಅಧ್ಯಕ್ಷ ಮಹಾದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಗೌರವ ಅಧ್ಯಕ್ಷ ಕೆ ಸಿದ್ದಪ್ಪ ಉಪಾಧ್ಯಕ್ಷ ಟಿ ಮಲ್ಲಿಕಾರ್ಜುನ ಕಾರ್ಯದರ್ಶಿ ಬಿ ರಾಘವೇಂದ್ರ ಖಜಾಂಚಿ ಷಣ್ಮುಖಪ್ಪ ಪದಾಧಿಕಾರಿಗಳು ಎಲ್ಲಾ ಸದಸ್ಯರು ತಾಲೂಕ ಗಂಗಾ ಮತ ಸಮಾಜದವರು ಇದ್ದರು.

Leave a Reply

Your email address will not be published. Required fields are marked *

error: Content is protected !!