
ಓಬ್ಬವನವರ ಜಯಂತಿಯನ್ನು ಅರ್ಥಪೊರ್ಣವಾಗಿ ಆಚರಿಸಬೇಕು : ಬಸವರಾಜ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 8- ವೀರಮಾತೆ ಒನಿಕೆ ಓಬವ್ವನವರು ಸ್ವಾತಂತ್ರö್ಯಕೋಸ್ಕರ ಹೋರಾಡಿದ ವೀರ ಮಹಿಳೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಅವರ ಜಯಂತಿಯನ್ನು ಅರ್ಥಪೊರ್ಣವಾಗಿ ಆಚರಿಸೋಣ ಎಂದು ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ನಡೆದ ವೀರಮಾತೆ ಒನಿಕೆ ಓಬ್ಬವನವರ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒನಿಕೆ ಒಬ್ಬವನವರು ಇಡೀ ದೇಶದ ಮಹಿಳೆಯರಿಗೆ ದಾರಿದೀಪ ಇದೇ ನವೆಂಬರ್ ೧೧ ರಂದು ವೀರಮಾತೆ ಒನಿಕೆ ಓಬ್ಬವನವರು ಜಯಂತಿಯನ್ನು ಸಮಾಜದವರ ಸಲಹೆ, ಸಹಕಾರ, ಸೂಚನೆ ಮೂಲಕ ಎಲ್ಲರೂ ಸೇರಿ ಜಯಂತಿಯನ್ನು ಸರಳ ರೀತಿಯಲ್ಲಿ ಅರ್ಥಪೊರ್ಣವಾಗಿ ಆಚರಿಸೋಣ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ಪ್ರತಿಯೊಬ್ಬ ಮಹಾತ್ಮರ ಜಯಂತಿಯನ್ನು ಮನೆಯ ಹಬ್ಬದಂತೆ ಆಚರಣೆ ಮಾಡುತ್ತೇವೆ ಅದೇರೀತಿ ಈ ಜಯಂತಿಯನ್ನು ಅರ್ಥಪೊರ್ಣವಾಗಿ ಆಚರಿಸಬೇಕು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಅಂದಪ್ಪ ಹಾಳಕೇರಿ ಮಾತನಾಡಿ, ವೃತ್ತದ ಸುತ್ತಮುತ್ತ ಸ್ವಚತೆಗೊಳಿಸಿ ಅಲಂಕರಸಿ ಪೆಂಡಾಲ್ ವ್ಯವಸ್ಥೆ ಮಾಡಬೇಕು ಜಯಂತಿಯನ್ನು ಅಚ್ಚುಕಟ್ಟಾಗಿ ಅರ್ಥಪೊರ್ಣವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾ ಸಭಾ ತಾಲೂಕಾಧ್ಯಕ್ಷ ಅಂದಪ್ಪ ಹಾಳಕೇರಿ, ಛತ್ರಪ್ಪ ಛಲವಾದಿ, ಸಿದ್ದಪ್ಪ ಕಟ್ಟಿಮನಿ, ಮಾಹಂತೇಶ ಛಲವಾದಿ, ವಿಜಯ ಜಕ್ಕಲಿ, ಶಂಕರಪ್ಪ ಜಕ್ಕಲಿ, ಲೋಕೋಪಯೋಗಿ ಇಲಾಖೆ ಮಲ್ಲಿಕಾರ್ಜುನ ಬಿ, ಸಮಾಜ ಕಲ್ಯಾಣ ಇಲಾಖೆಯ ಶಶಿಧರ ಸಕ್ರಿ, ಬಿಸಿಎಂ ಇಲಾಖೆಯ ಶಿವಶಂಕರ ಕರಡಕಲ್, ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಅರಣ್ಯ ಇಲಾಖೆಯ ಬಸವರಾಜ ಗೊಗೇರಿ, ತೋಟಗಾರಿಕೆ ಇಲಾಖೆಯ ನಿಂಗನಗೌಡ್ರ ಪಾಟೀಲ್, ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ, ಪಶು ಇಲಾಖೆಯ ಸಂಜಯ ಚಿತ್ರಗಾರ, ಸಿಡಿಪಿಓ ಬೆಟದಪ್ಪ ಮಾಳೆಕೊಪ್ಪ, ತಾಲೂಕ ವೈದ್ಯಾಧಿಕಾರಿ ಡಾ.ವಿದ್ಯಾ, ರೇಷ್ಮೆ ಇಲಾಖೆಯ ಹೆಚ್.ರೇಖಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.