
ಸಿಎಂ ಸಿದ್ದರಾಮಯ್ಯ ಕಾರ್ಯದರ್ಶಿಯಾಗಿ ಬಿ.ಬಿ.ಕಾವೇರಿ ನೇಮಕ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 6- ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಯುಕ್ತರಾಗಿದ್ದ ಬಿ.ಬಿ.ಕಾವೇರಿ ಐಎಎಸ್ ಅಧಿಕಾರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕಾವೇರಿ ಅವರಿಗೆ ಸಿಎಂ ಕಾರ್ಯದರ್ಶಿ ಹುದ್ದೆ ಜೊತೆಗೆ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಸಮವರ್ತಿ ಪ್ರಭಾರ ಹೊಣೆಯನ್ನು ನೀಡಲಾಗಿದೆ.
ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಲೋಕ ಶಿಕ್ಷಣ ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿಯ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ಅಭಿನಂದಿಸಿದ್ದಾರೆ.