
ಬಳ್ಳಾರಿ ಜಿಲ್ಲಾ 12,950 ಅನರ್ಹ ಬಿಪಿಎಲ್ ಪಡಿತರ ಕಾರ್ಡುಗಳು ರದ್ದು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ಜಿಲ್ಲೆಯಲ್ಲಿ ೧೨,೯೫೦ ಅನರ್ಹ ಬಿಪಿಎಲ್ ಪಡಿತರ ಕಾರ್ಡುಗಳಿದ್ದು ಅವುಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಇನ್ನೊಂದೆಡೆ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಗಳು ೧೭೭೨ ಕಾರ್ಡುಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಎಪಿಎಲ್‌ಗೆ ಪರಿವರ್ತಿಸಲಾಗಿದೆ ಆಹಾರ ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ಸಮಿತಿಯ ಸದಸ್ಯರಾದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರ ಕುಟುಂಬ ತಂತ್ರಾAಶ ದಡಿ ರಾಜ್ಯದಾದ್ಯಂತ ಆದಾಯ ತೆರಿಗೆ ಪಾವತಿದಾರರು ಸರಕಾರಿ ನೌಕರರು ಹಾಗೂ ೪೧.೨೦ ಲಕ್ಷಕ್ಕೂ ಮೀರಿದ ಆದಾಯ ಹೊಂದಿರುವ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲದ ಕುಟುಂಬಗಳ ೧೩,೧೩೩ ಬಿಪಿಎಲ್ ಕಾರ್ಡುಗಳನ್ನು ಪತ್ತೆ ಮಾಡಿದೆ ಇದರಲ್ಲಿ ಈಗಾಗಲೇ ೧೮೩ ಕಾರ್ಡುಗಳನ್ನು ರದ್ದು ಮಾಡಲಾಗಿದ್ದು ಉಳಿಕೆ ೧೨, ೯೫೦ ಕಾರ್ಡುಗಳ ರದ್ದತಿಗೆ ನಡೆಯುತ್ತಿದೆ ಸಿರುಗುಪ್ಪ ತಾಲೂಕಿನಲ್ಲಿ ೧೪೫೪ ಅನರ್ಹ ಬಿಪಿಎಲ್ ಕಾರ್ಡುಗಳ ಪೈಕಿ ೬ ಕಾರ್ಡುಗಳನ್ನು ರದ್ದು ಮಾಡಲಾಗಿದೆ.
ತಾಲೂಕಿನಲ್ಲಿ ೫,೪೩೧ ಅನರ್ಹ ಬಳಿ ಬಿಪಿಎಲ್ ಕಾರ್ಡ್ ಇತ್ತು ಈ ಪೈಕಿ ೨೧ ಕಾರ್ಡ್ ರದ್ದು ಮಾಡಲಾಗಿದೆ ಬಳ್ಳಾರಿ ಗ್ರಾಮಾಂತರ ೧೮೮೩ ಕಾರ್ಡಿಗೆ ಪ್ರತಿಯಾಗಿ ೨೨ ಕಾರ್ಡ್ ರದ್ದಾಗಿದೆ ಕಂಪ್ಲಿ ತಾಲೂಕು ೧೨೪೨ ಪೈಕಿ ೮೩ ಕಾರ್ಡ್ ರದ್ದಾಗಿದೆ ಕುರುಗೋಡು ೩೪೮ ಪೈಕಿ ೧೪ ಕಾರ್ಡ್ರದ್ದಾಗಿದೆ ಸಂಡೂರು ತಾಲೂಕು ೨೭೭೫ ಪೈಕಿ ೩೭ ಕಾರ್ಡ್ ರದ್ದು ಮಾಡಲಾಗಿದೆ ಇದಿಷ್ಟೇ ಅಲ್ಲ ಬಳ್ಳಾರಿ ಜಿಲ್ಲೆಯಲ್ಲಿ ೭೧ ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರು ಸದ್ಯ ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.
ಬಳ್ಳಾರಿ ತಾಲೂಕು ೩೦ ಬಳ್ಳಾರಿ ಗ್ರಾಮಾಂತರ ೬ ಕಂಪ್ಲಿ ೫ ಕುರುಗೋಡು ೩ ಸಂಡೂರು ೧೪ ಸಿರುಗುಪ್ಪ ದಲ್ಲಿ ೧೩ ಮಂದಿ ಸರ್ಕಾರಿ ನೌಕರರ ಬಳಿ ಬಿಪಿಎಲ್ ಕಾರ್ಡ್ ಇತ್ತು ಆಹಾರ ನಾಗರಿಕ ಪೂರೈಕೆ ಇಲಾಖೆ ಅಂಕಿ ಅಂಶಗಳಿ0ದ ಗೊತ್ತಾಗಿದೆ ಎಂದು ಅಬ್ದುಲ್ ನಬಿ ಅವರು ಹೇಳಿದರು ೨೦೨೧-೨೪ ನಡುವಿನ ಅವಧಿಯಲ್ಲಿ ಅರ್ಹತೆ ಇಲ್ಲದ ೨,೮೧೩ ಬಳಿ ಪಿಪಿಎಲ್ ಕಾರ್ಡ್ ಗಳಿದ್ದವು ಅಂತವರಿಗೆ ದಂಡ ವಿಧಿಸಿ ಇಲಾಖೆಯು ೨೩,೫೪೮೭ ಸಂಗ್ರಹ ಮಾಡಿದೆ ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಮೃತರ ಹೆಸರಿನಲ್ಲಿದ್ದ ೩೫೭೬ ಕಾರ್ಡುಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಗೊಳಿಸಿದೆ ಬಳ್ಳಾರಿ ತಾಲೂಕು ಒಂದರಲ್ಲೆ ೧೫೫೬ ಮೃತರ ಹೆಸರಿನಲ್ಲಿ ಕಾರ್ಡುಗಳು ಇದ್ದವು ಕಂಪ್ಲಿ ೩೪೧ ಕುರುಗೋಡು ೨೮೨ ಸಂಡೂರು ೫೮೯ ಸಿರುಗುಪ್ಪ ದಲ್ಲಿ ೮೦೮ ಕಾರ್ಡುಗಳು ರದ್ದಾಗಿವೆ ಬಳ್ಳಾರಿ ಜಿಲ್ಲೆಯಲ್ಲಿ ಆರು ತಿಂಗಳಿAದ ಪಡಿತರ ಪಡೆಯದವರ ಕಾರ್ಮಿಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ ಇಂಥವರಿಗೆ ಪರಿಶೀಲನೆ ಮಾಡಿ ಮತ್ತೆ ಪಡಿತರ ನೀಡುತ್ತೇವೆ ೧೨,೯೫೦ ಅನರ್ಹ ಕಾರ್ಡುಗಳು ಪತ್ತೆಯಾಗಿವೆ ಅವುಗಳನ್ನು ಆಹಾರ ಶಿರಸ್ತೆದಾರರು ಮತ್ತು ಆಹಾರ ಇನ್ಸ್ಪೆಕ್ಟರ್ ಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ.
ಆಧಾರ್ ಲಿಂಕ್ ಮಾಡಿದಾಗ ಹಲವರಿಗೆ ಸಮಸ್ಯೆಯಾಗಿದೆ ಅಂತ ಪ್ರಕರಣಗಳ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದೇವೆ ಸಮಸ್ಯೆ ಯಾದವರಿಗೆ ಇಲಾಖೆ ಸ್ಪಂದಿಸಲಿದೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕಿ ಸಕೀನಾ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಬಳ್ಳಾರಿ ಜಿಲ್ಲೆಯಲ್ಲಿ ೭,೪೮೮ ಕಾರ್ಡ್ ದಾರರು ಸುಮಾರು ಆರು ತಿಂಗಳಿAದ ಪಡಿತರವನ್ನೇ ಪಡೆದುಕೊಂಡಿಲ್ಲ ಇಂಥ ಕಾರ್ಡ್ ಗಳನ್ನು ಸರ್ಕಾರ ಅಮಾನತು ಮಾಡಿದೆ ದೀರ್ಘಕಾಲದ ವರೆಗೆ ಪಡಿತರವನ್ನೇ ಪಡೆಯದವರು ಸೂಕ್ತ ದಾಖಲೆ ಸಮಜಾಯಿಸಿ ನೀಡಿ ಪಡಿತರ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ ಬಳ್ಳಾರಿ ತಾಲೂಕು ಒಂದರಲ್ಲೆ ೩,೫೬೫ ಮಂದಿ ಬಿಪಿಎಲ್ ಕಾರ್ಡ್ ದಾರರು ಆರು ತಿಂಗಳಿ0ದ ಪಡಿತರ ಪಡೆಯದೆ ನಿಷ್ಕ್ರಿಯ ರೆನಿಸಿಕೊಂಡಿದ್ದಾರೆ ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯಕ್ಕೆ ೨ ,೬೯,೧೩೪ ಬಿಪಿಎಲ್ ಕಾರ್ಡ್ ಗಳಿದ್ದವು ಈ ವರ್ಷ ಹೊಸದಾಗಿ ೧೮,೮೪೮ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಬಂದಿವೆ ಎನ್ನಲಾಗಿದ್ದು ೧೪ ೪೭೧ ಅರ್ಜಿಗಳನ್ನು ಪರಿಶೀಲಿಸಲಾಗಿದೆ ೮೯೬೬ ಹೊಸ ಬಿಪಿಎಲ್ ಕಾರ್ಡುಗಳನ್ನು ಕೊಡಲಾಗಿದೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಮಿತಿಯ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ.
ಅನರ್ಹ ರೇಷನ್ ಕಾರ್ಡುಗಳು ಮಾತ್ರ ರದ್ದು ಅರ್ಹ ಬಡವರಿಗೆ ಕಾರ್ಡ್ ತಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದಾಗದು ಅನರ್ಹರನ್ನು ಎಪಿಎಲ್‌ಗೆ ವರ್ಗಾಯಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ಎಪಿಎಲ್ ಬಿಪಿಎಲ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.