
ಬಳ್ಳಾರಿ : ನಾಳೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 29- ನಗರದ ಸಂಗನಕಲ್ಲು ರಸ್ತೆಯ ಸುಬ್ಬರಾವ್ ಕ್ಯಾಂಪ್ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 3 ನೇ ವರ್ಷದ ಜಾತ್ರಾ ಮಹೋತ್ಸವ ಜು.30 ರಂದು ನಡೆಯಲಿದೆ.
ಪ್ರತಿಯೊಬ್ಬ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ದೇಗುಲದ ಶ್ರೀ ಸದ್ಗುರು ಜುಮಾರಿ ತಾತ ಅವರು ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವ ನಿಮಿತ್ತ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಜು.29 ರಂದು ಬೆಳಿಗ್ಗೆ ವಿಶೇಷ ಪೂಜೆ ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ, ಉಚ್ಚಾಯ ವಿಜೃಂಭಣೆಯಿಂದ ನಡೆಯಲಿದೆ.
ಜು.30 ರಂದು ಆಷಾಢ 4ನೇ ಮoಗಳವಾರ ಸಂಜೆ ಮಹಾ ರಥೋತ್ಸವ, ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಳಸ ಕುಂಭ ಮೆರವಣಿಗೆ ನಡೆಯಲಿದೆ.
ಜು.31ಕ್ಕೆ ಪಲ್ಲಕ್ಕಿ ಉತ್ಸವ, ನಂತರ ಲಂಕಾ ದಹನ, ಸಂಜೆ ಪಟಾಕಿ ಉತ್ಸವ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ.
ಜಾತ್ರೆ ಮಹೋತ್ಸವದ ಎಲ್ಲ ಪೂಜೆಗಳು ಶ್ರೀ ಸದ್ಗುರು ಜುಮಾರಿ ತಾತ ಅವರ ನೇತೃತ್ವದಲ್ಲಿ ನಡೆಯಲಿದ್ದು, ಜು.30 ರಂದು ಪದ್ಮಶ್ರೀ ಪುರಸ್ಕೃತರು ಶ್ರೀ ಮoಜಮ್ಮ ಜೋಗತಿ ಅವರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.