ವಿಜಯನಗರ ಶ್ರೀಕೃಷ್ಣದೇವರಾಯ ವಿವಿಗೆ ಬಳ್ಳಾರಿ ಸಿಂಡಿಕೇಟ್  ನಾಮಕರಣ ಮಾಡುವಂತೆ ಒತ್ತಾಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 31- ವಿಶ್ವವಿದ್ಯಾಲಯದ ಮಾಜಿ ಸೇನೆಟ್ ಸಿಂಡಿಕೇಟ್ ಸದಸ್ಯರ ನಿಯೋಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳ ಪರವಾಗಿ ಕುಲಸಚಿವ ರುದ್ರೇಶ್ ಇವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸರ್ಕಾರ ಇತ್ತೀಚೆಗೆ ಬಳ್ಳಾರಿಯ ವಿಶ್ವವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮಕರಣ ಮಾಡಿದ್ದು ಅದರಲ್ಲಿ ಐದು ಜನರು ಬಳ್ಳಾರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರಾಗಿದ್ದಾರೆ ಅಖಂಡ ಬಳ್ಳಾರಿ ಜಿಲ್ಲೆಯ ಒಬ್ಬ ವ್ಯಕ್ತಿ ಸಿಂಡಿಕೇಟ್ ಗೆ ನಾಮಕರಣ ಆಗಿದ್ದು ಹಿಂದುಳಿದ ೫ ಸದಸ್ಯರನ್ನು ತಕ್ಷಣ ಸರ್ಕಾರ ಬದಲಾವಣೆ ಮಾಡಿ ಅಖಂಡ ಬಳ್ಳಾರಿ ಜಿಲ್ಲೆಯವರಲ್ಲಿ ಅರ್ಹರನ್ನು ನಾಮಕರಣ ಮಾಡುವಂತೆ ನಿಯೋಗ ಒತ್ತಾಯ ಮಾಡಿತು.

ಈ ಹಿಂದೆ ಬಳ್ಳಾರಿ ಜಿಲ್ಲೆ ಮೈಸೂರು ವಿಶ್ವವಿದ್ಯಾಲಯ ನಂತರ ಕರ್ನಾಟಕ ವಿಶ್ವವಿದ್ಯಾಲಯ ಆನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ್ದು ಪ್ರಸ್ತುತ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವವಿದ್ಯಾಲಯದ ಆಡಳಿತದಲ್ಲಿ ಸ್ಥಳೀಯರೇ ಇದ್ದರೆ ವಿಶ್ವವಿದ್ಯಾಲಯದ ಅಭಿವೃದ್ಧಿ ಸಾಧ್ಯವೆಂದು ಮನವರಿಕೆ ಮಾಡಿಕೊಡಲಾಯಿತು.

ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಟ್ಟು ೭೯ ಕಾಲೇಜುಗಳು ಬರುತ್ತಿದ್ದು ಬಳ್ಳಾರಿ ನಗರ ಒಂದರಲ್ಲಿ ೧೯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಪರಿಸ್ಥಿತಿ ಹೀಗಿದ್ದರೂ ಬಳ್ಳಾರಿ ನಗರದಿಂದಾಗಲಿ ಜಿಲ್ಲೆಯಿಂದ ಹೆಚ್ಚು ಜನ ಸಿಂಡಿಕೇಟ್ ಸದಸ್ಯರು ನೇಮಕ ಆಗದೆ ಇರುವುದು ವಿಷಾದನೀಯ ಕಾರಣ ಕೂಡಲೇ ಸರ್ಕಾರ ನೇಮಕವಾಗಿರುವ ಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರನ್ನು ಅವರ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಮುಂದುವರಿಸಬಹುದಾಗಿದೆ ಎಂದು ತಿಳಿಸಲಾಯಿತು.

ನಿಯೋಗದಲ್ಲಿ ಮಾಜಿ ಸನೆಟ್ ಹಾಗೂ ಸಿಂಡಿಕೇಟ್ ಸದಸ್ಯರುಗಳಾದ ಕೆ ಎಂ ಮಹೇಶ್ವರ ಸ್ವಾಮಿ, ಹೆಚ್ ಜಯಪ್ರಕಾಶ್ ಗೌಡ, ಕೆ.ತಿಪ್ಪೇಸ್ವಾಮಿ, ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ.ಎಸ್.ಪ್ರಭಯ್ಯ, ಸಿ.ಮಂಜುನಾಥ ಹಾಗೂ ಜಿಲ್ಲಾ ಕಸಪದ ಬಸವರಾಜ್ ಗದಗಿನ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!