7

ಭಾಗ್ಯನಗರ : ವಚನ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 8- ಕನ್ನಡ ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಕನಕದಾಸ ಸಂಗೀತ ವಿದ್ಯಾ ಸಾಂಸ್ಕೃತಿಕ ಕಲಾಸಂಘ ಮಾದಿನೂರ ಇವರ ಸಹಯೋಗದೊಂದಿಗೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಭಾಗ್ಯನಗರದಲ್ಲಿ ವಚನ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವು ಜರುಗಿತು.

ವಚನ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವು ಇದೇ ರೀತಿ ಎಲ್ಲಾ ಕಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು. ಏಕೆಂದರೆ ಇಂದಿನ ಕಾಲಮಾನದಲ್ಲಿ ಜಾನಪದ ಸಂಗೀತವು ಅಳಿಸಿಹೋಗುತ್ತಿದೆ. ಇಂದಿನ ಯುವ ಜನರಿಗೆ ಜಾನಪದ ಸಂಗೀತದ ಬಗ್ಗೆ ಅರಿವು ಮೂಡಬೇಕು ಎಂದು ಚಿನ್ನಪ್ಪ ಕಂಬಳಿ ಅಧ್ಯಕ್ಷರು ಶ್ರೀ ಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಭಾಗ್ಯನಗರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊಟ್ರೇಶ ಮರಬನಳ್ಳಿ ಅವರು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಕೊಪ್ಪಳ, ತಿಪ್ಪಣ್ಣ ಹೊನ್ನಂಗುರ ಅವರು ಕಲಾ ಪ್ರೇಮಿಗಳು ಬಾಗ್ಯನಗರ, ಹೆಚ್.ಎ.ಗೌಡರ ಅವರು ಜಂಟಿ ನಿರ್ದೇಶಕರು ಶ್ರೀ ಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯನಗರ, ಬಿ.ಎಸ್.ಬೀರನಾಯ್ಕರ ಅವರು ಖಜಾಂಚಿ ಶ್ರೀ ಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯನಗರ, ಶಿವಶಂಕರ ಮರಡಿ ಅವರು ನಿರ್ದೇಶಕರು ಶ್ರೀ ಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯನಗರ, ಸಲೀಂ ಸಾಬ ಅವರು ಕಲಾಪ್ರೇಮಿಗಳು ಭಾಗ್ಯನಗರ, ಶಿವಾನಂದ ಹೂಗಾರ ಅವರು ಕಲಾಪ್ರೇಮಿಗಳು ಭಾಗ್ಯನಗರ, ಸಿದ್ದಮ್ಮ ಮರಡಿ ಅವರು ಕಲಾಪ್ರೇಮಿಗಳು ಭಾಗ್ಯನಗರ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ರಾಮಣ್ಣ ತಂದೆ ಸಣ್ಣ ಮಲ್ಲಪ್ಪ ಅವ್ವಣ್ಣಿ ಸಾ||ಮಾದಿನೂರ ಅವರು ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಹಾಡಿ, ಎಲ್ಲರ ಗಮನವನ್ನು ಸೆಳೆದರು. ದೇವಮ್ಮ ತಂದೆ ರಾಮಣ್ಣ ಅವ್ವಣ್ಣಿ, ನಾಗರಾಜ ತಂ. ರಾಮಣ್ಣ ಅವ್ವಣ್ಣಿ, ಹನುಮಂತಪ್ಪ ಕಾಮನೂರ ಇವರ ಜೊತೆ ಇದ್ದರು. ವೀರಭದ್ರಪ್ಪ ಶಿವಸಿಂಪುರ ಸಾ||ಮಾದಿನೂರು ಅವರು ತಬಲಾ ವಾದಿಸಿದರು.

Leave a Reply

Your email address will not be published. Required fields are marked *

error: Content is protected !!