ತಾವರಗೇರಾ : ಶಾವಣ ಮಾಸದ ಭಜನೆ ಸಂಪನ್ನ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 4- ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಕಡೆ ಸೋಮವಾರ ನಿಮಿತ್ಯ ಜಲಾಭಿಷೇಕ ಮತ್ತು ಪಂಚಾಂಭೃತ ಅಭಿಷೇಕ ಹಾಗೂ ವಿಶೇಷ ಪೂಜೆ ಅಲಂಕಾರ ಕಾರ್ಯಗಳು ನಡೆದವು.
ನಂತರ ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಿಂದ ಕುರಹಿನ ಶೆಟ್ಟಿ ಸಮಾಜದಿಂದ ಶ್ರಾವಣ ಮಾಸ ನಿಮಿತ್ಯ ತಿಂಗಳ ಪರ್ಯಂತರ ಭಜನೆ ಕಾರ್ಯ ನಡೆದಿದ್ದು, ಇದರ ನಿಮಿತ್ಯ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶ್ರೀ ನೀಲಕಠೇಶ್ವ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭ,ಕಳಸಗಳನ್ನು ಹಿಡಿದು ಭಾಗವಹಿಸಿದ್ದರು.
ಈ ಸಂದರ್ಬದಲ್ಲಿ ಭಜನಾತಂಡ ಹಾಗೂ ವಾದ್ಯ ಮೇಳಗಳು ಭಾವಹಿಸಿ ಮೆರವಣಿಗೆಗೆ ಮೆರಗು ತಂದಿತ್ತು.
ಸಮಾಜದ ಮುಖಂಡರಾದ ನಾರಾಯಣಪ್ಪ ಐಲಿ, ಚೆಂದ್ರಶೇಕರ ಐಲಿ, ಪ್ರಕಾಶ ಉಪ್ಪಳ, ಸಣ್ಣತಮ್ಮ ಶಿರವಾರ, ಹನುಮಂತಪ್ಪ ಶಿರವಾರ, ಡಾ.ಯಮನಪ್ಪ ಶಿರವಾರ, ಪಂಪಣ್ಣ ಐಲಿ (ಪೇಟಿ), ಸಿದ್ದಣ್ಣ ಐಲಿ ಹಾಗೂ ಕುರುಹಿನ ಶೆಟ್ಟಿ ಸಮಾಜದ ಮಹಿಳೆಯರು, ಹಿರಿಯರು ಹಾಗೂ ಯುವಕರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.