
ಜಿಂದಾಲ್ ಕಂಪನಿಗೆ ಭೂಮಿ ಪರಾಬಾರೆ : ಡಿವೈಎಫ್‌ಐ ನಿಂದ ನಾಳೆ ಪಾದಯಾತ್ರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 3- ರಾಜ್ಯ ಸರ್ಕಾರ ಜೆ ಎಸ್ ಡಬ್ಲ್ಯೂ ಉಕ್ಕಿನ ಕಾರ್ಖಾನೆಗೆ ಅತಿ ಅಗ್ಗದ ದರದಲ್ಲಿ ಅಂದರೆ ಕೇವಲ ೧.೨೫ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ನಾಳೆ ಬಳ್ಳಾರಿಯಿಂದ ಕುಡಿತಿನಿ ಮಾರ್ಗವಾಗಿ ತೋರಣಗಲ್ ಜಿಂದಾಲ್ ಕಾರ್ಖಾನೆ ವರೆಗೆ ಡಿವೈಎಫ್‌ಐ ಸಂಘಟನೆಯಿ0ದ ಪಾದಯಾತ್ರೆಯನ್ನು ನಡೆಸಲಾಗುವುದು ಎಂದು ರ‍್ರಿಸ್ವಾಮಿ ಕೊಳಗಲ್ ತಿಳಿಸಿದ್ದಾರೆ.
ಅವರಿಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ನಾಳೆ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಬಳ್ಳಾರಿ ನಗರದ ಕೇಂದ್ರ ಪ್ರದೇಶವಾದ ರಾಯಲ್ ಸರ್ಕಲ್‌ನಿಂದ ಪ್ರಾರಂಭಗೊAಡು, ಕುಡುತಿನಿ ಪಟ್ಟಣಕ್ಕೆ ತಲುಪುವುದು, ಅಂದು ಆ ದಿನ ಕುಡಿತಿನಿಯಲ್ಲಿ ತಂಗಲಾಗುವುದು, ಮರುದಿನ ೬ ಬೆಳಿಗ್ಗೆ ಕುಡುತಿನಿ ನಿಂದ ತೋರಣಗಲ್ಲು ಒಲ್ಡ್ ಗೇಟ್‌ವರಗೆ ತಲುಪಿ ಅಲ್ಲಿ ಅಂದು ಪ್ರತಿಭಟನೆ ಧರಣಿಯನ್ನು ನಡೆಸಲಾಗುವುದು ಎಂದರು.
ಸ್ಥಳೀಯ ನಿರುದ್ಯೋಗ ಯುವಜನರಿಗೆ ಉದ್ಯೋಗ ನೀಡಿಕೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರಥಮ ಆದ್ಯತೆಯಾಗಿ ನೀಡಬೇಕು ಮತ್ತು ಜಿಂದಾಲ್ ಮಾಲೀಕರಿಗೆ ೫,೬೬೭ ಎಕರೆ ಜಮೀನು ಮಾರಾಟಕ್ಕೆ ಅನುಮೋದನೆ ನೀಡಿದ ಕಾಂಗ್ರೆಸ್ ಸರ್ಕಾರ, ಜಮೀನಿನ ಮೂಲ ರೈತರಿಗೆ ಮಾರುಕಟ್ಟೆಯ ಮೌಲ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು, ಕಾರ್ಖಾನೆಯ ಸುತ್ತಮುತ್ತಲ ಹಳ್ಳಿಗಳಿಗೆ ಸಿ ಎಸ್ ಆರ್ ನಿಧಿ ಅಡಿಯಲ್ಲಿ ಸ್ಥಳೀಯ ಬಡ ಜನರಿಗೆ ವಸತಿ, ನಿವೇಶನ ರಹಿತರಾದ ಅರ್ಹ ಫಲಾನುಭವಿ ಕುಟುಂಬಗಳಿಗೆ ವಸತಿ ನಿವೇಶನ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಅದೇ ರೀತಿ ಕುಡುತಿನಿ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ರೈತರಿಂದ ಪಡೆದ ೧೩೦೦೦ ಎಕರೆ ಭೂಮಿಯನ್ನು ಪಡೆದ ಮಿತ್ತಲ್, ಬ್ರಾಹ್ಮಣಿ,ಎನ್.ಎಮ್.ಡಿ.ಸಿ ಕಂಪನಿಗಳು ಸರಿ ಸುಮಾರು 14 ವರ್ಷ ಕಳೆದರೂ ಕೈಗಾರಿಕೆಗಳು ಸ್ಥಾಪನೆ ಮಾಡಿರುವುದಿಲ್ಲ ಇಂತಹ ಭೂಮಿಯನ್ನು ವಾಪಸ್ ಪಡೆದುಕೊಂಡು ಮತ್ತೆ ರೈತರಿಗೆ ನೀಡಬೇಕು, ಭೂಮಿಯನ್ನು ಕಳೆದುಕೊಂಡು ಉದ್ಯೋಗಗಳು ಇಲ್ಲದೆ ಭೂ ಸಂತ್ರಸ್ಥ ಕುಟುಂಬಗಳು ಬಿದಿಪಾಲಾಗಿದ್ದು ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಪನ್ಮೂಲಗಳನ್ನು ಪಡೆದುಕೊಂಡು ಸ್ಥಾಪನೆಯಾದ ಜಿಂದಾಲ್ ಕಾರ್ಖಾನೆಯ ಕೆಲಸಗಳು ಪರ ರಾಜ್ಯದವರ ಪಾಲಾಗುತ್ತಿದೆ ಇಲ್ಲಿನ ಸ್ಥಳೀಯರು ಮಾತ್ರ ಕೇವಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಬೇಕು ಜೊತೆಗೆ ಬಳ್ಳಾರಿ ಸುತ್ತಮುತ್ತಲಿನ ಗ್ರಾಮದ ಯುವ ಜನತೆ ಇಲ್ಲಿನ ಗುತ್ತಿಗೆ ಆಧಾರದಲ್ಲಿನ ಕೆಲಸದಿಂದ ರೋಸಿ ಹೋಗಿ ದೂರದ ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ ಈ ಎಲ್ಲಾ ಸಮಸ್ಯೆಗಳನ್ನು ವಿರೋಧಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಬಳ್ಳಾರಿ ಜಿಲ್ಲಾ ಸಮಿತಿ ಬಳ್ಳಾರಿ ಇಂದ ಜಿಂದಾಲ್ ಕಾರ್ಖಾನೆ ಓಲ್ಡ್ ಗೇಟ್ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಸಂಘಟನೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು, ಆರ್‌ಬಿಐನ ಮುಖಂಡರು ಸೇರಿದಂತೆ ಇತರರಿದ್ದರು.