
ನಾಲ್ಕು ವರ್ಷದ ಬಾಲಕನಿಗೆ ಬೀದಿನಾಯಿ ಕಡಿತದಿಂದ ಗಂಭೀರ ಗಾಯ: ಶಾಸಕ ಗವಿಯಪ್ಪ ಬೇಟಿ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )ಜು.31: ನಗರದ 1ನೇ ವಾರ್ಡಿನ ಚಿತ್ತಾವಾಡಿಗಿಯ ಕಾಕಾರ ಓಣಿಯಲ್ಲಿ ಪರುಶುರಾಮ ಎನ್ನುವ ನಾಲ್ಕು ವರ್ಷದ ಬಾಲಕನಿಗೆ ಬೀದಿ ನಾಯಿ ಕಡಿತದಿಂದ ಕಾಲಿಗೆ ತೀರ್ವ ಗಾಯವಾಗಿದ್ದು ಮತ್ತು ಬಲ ಕೆನ್ನೆಯಮಾಂಸ ಖಂಡ ಕಿತ್ತು ಹೋಗಿದ್ದು ಪೋಷಕರಿಗೆ ಆಘಾತ ಉಂಟುಮಾಡಿದೆ. ಬಿದಿನಾಯಿಗಳ ಹಾವಳಿಯಿಂದ ಸ್ಥಳಿಯರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ .
ಬಾಲಕನನ್ನು ಪೋಷಕರು ನಗರದ ಸಾರ್ವಜನಿಕ ಆಸ್ಪತ್ರೆಗೆ ಧಾಖಲು ಮಾಡಿ ಚಿಕಿತ್ಸೆಕೊಡಿಸಿದ್ದಾರೆ.
ಬಲ ಕೆನ್ನೆ ಕಿತ್ತು ಹೋಗಿರುವುದರಿಂದ, ರೋಗನಿರೋಧಕ ಇಂಜೆಕ್ಷನ್, ಹಾಗೂ ಹಿಮೋಗ್ಲೋಬಿನ್ ಹಾಕಲಾಗಿದೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಬಳ್ಳಾರಿಯ ವಿಮ್ಸಿಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯಾಧಿಕಾರಿ ಶಂಕರ್ ನಾಯ್ಕ್ ತಿಳಿಸಿದರು.
ಭೇಟಿ : ವಿಷಯ ತಿಳಿಯುತ್ತಿದ್ದಂತೆ ಶಾಸಕರ ಹೆಚ್. ಆರ್. ಗವಿಯಪ್ಪ ನವರು, ಜಿಲ್ಲಾ ವೈದ್ಯಧಿಕಾರಿಗಳಾದ ಶಂಕರ್ ನಾಯ್ಕ್, ನಗರ ಸಭೆ ಪೌರಾಯುಕ್ತರಾದ ಚಂದ್ರಪ್ಪ ರೊಂದಿಗೆ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಪೋಷಕರಿಗೆ ವೈಯಕ್ತಿಕವಾಗಿ 10,000ರೂ. ಧನ ಸಹಾಯ ಮಾಡಿ, ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಬಳ್ಳಾರಿಯ ವಿಮ್ಸ್ ನಿರ್ದೇಶಕರಿಗೆ ಮಾತನಾಡಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
1ನೇ ವಾರ್ಡಿನಲ್ಲಿ 500ಕ್ಕೂ ಹೆಚ್ಚು ನಾಯಿಗಳಿವೆ ಎಂದು ಮಾಹಿತಿ ಇದೆ, ನಾಯಿಗಳಿಗೆ ಆಪರೇಷನ್ ಮಾಡಿ, ಇಂಜೆಕ್ಷನ್ ಮಾಡಲು ಟೆಂಡರ್ ಕರೆಯಲಾಗುವುದು ಅಗ್ರೆಸಿವ್ ಆಗಿರುವ ನಾಯಿಗಳ ಮೇಲೆ ಗಮನ ಹರಿಸಲಾಗುವುದು.
– ಚಂದ್ರಪ್ಪ, ನಗರ ಸಭೆ ಪೌರಾಯುಕ್ತರು