
ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು ಶಾಸಕರಿಂದ ಸಾಂತ್ವನ
ಕರುನಾಡ ಬೆಳಗು ಸುದ್ದಿ
ವಿಜಯನಗರ, 24- ಹೊಸಪೇಟೆ ತಾಲೂಕಿನ ಗುಂಡ್ಲುವದ್ದಿಗೇರಿ ಗ್ರಾಮದ ಅಜಯ ಎಂಬ ಬಾಲಕನು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಸೆ.೨೨ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಧಾವಿಸಿ, ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದರು. ಇದೆ ವೇಳೆ ಶಾಸಕರು ಧನ ಸಹಾಯ ಮಾಡಿದರು.
ಇಂತಹ ದುರ್ಘಟನೆಗಳು ತಾಲೂಕಿನಲ್ಲಿ ಮರುಕಳಿಸದ ಹಾಗೆ ಸೂಕ್ತ ಕ್ರಮವಹಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಶಾಸಕರು ಇದೆ ವೇಳೆ ತಿಳಿಸಿದರು.
ಈ ವೇಳೆ ಗ್ರಾಮಸ್ಥರು ಇದ್ದರು.