4

ಬನ್ನಿಕೊಪ್ಪ : ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಚರಣೆ

ಕರುನಾಡ ಬೆಳಗು ಸುದ್ದಿ

ಕುಕನೂರು, 25- ತಾಲೂಕಿನ ಬನ್ನಿಕೊಪ್ಪ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶುಕ್ರವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಪ್ಪ ವಿರೂಪಾಕ್ಷಪ್ಪ ಗೊಂದಿ ಮಾತನಾಡಿ, ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣದ ಹಿಂದೂ ಮಹಾಕಾವ್ಯವನ್ನು ಬರೆದಿದ್ದಕ್ಕಾಗಿ ವಾಲ್ಮೀಕಿ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ.

ಇದು ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆಯನ್ನು ಹೇಳುತ್ತದೆ, ವಾಲ್ಮೀಕಿ ಅವರನ್ನು ಭಾರತದಲ್ಲಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಮೂಲತ ವಾಲ್ಮೀಕಿ ಬರೆದ ರಾಮಾಯಣವು ೨೪೦೦೦ ಶ್ಲೋಕಗಳನ್ನು ಒಳಗೊಂಡಿದೆ, ರಾಮಾಯಣವು ಸುಮಾರು ೪೮,೦೦೦೨ಪದಗಳಿಂದ ಕೂಡಿದೆ ಇದು ಮಹಾಭಾರತದ ಪೂರ್ಣ ಪಠ್ಯದಕಾಲು ಭಾಗವಾಗಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಬ್ದುಲ್ ಸಾಬ್ ಬೆಟಿಗೇರಿ, ಮಹೇಶ್ ತಳವಾರ್, ಸಿದ್ದಪ್ಪ ಗಾವರಳ, ನಾರಾಯಣ ದೊಡ್ಡಮನಿ, ಯಲ್ಲಪ್ಪ ಕಂಪ್ ನಾಯಕ, ಕರಿಯಪ್ಪ ಅಡವಳ್ಳಿ, ಗಿರೀಶ್ ಕಡೆಮನಿ, ಶರಣಪ್ಪ ಹಲಗೇರಿ, ಗ್ಯಾನಪ್ಪ ಹಳ್ಳಿಕೇರಿ, ಮರಿಯಪ್ಪ ಕಂಪನಾಯಕ್, ದೇವಪ್ಪ ವೀರಾಪುರ್, ಮಹೇಶ್ ಮುತ್ತಾಳ, ಮಾರುತಿ ಹಡ್ವಳ್ಳಿ, ಯಂಕಪ್ಪ ದಾಸರ, ಹಾಗೂ ವಾಲ್ಮೀಕಿ ಸಂಘ ಸಮಾಜದ ಗಣ್ಯರು ಗುರು ಹಿರಿಯರು ಯುವಕರು ಇದ್ದರು.

Leave a Reply

Your email address will not be published. Required fields are marked *

error: Content is protected !!