
ನಾಳೆ ಪ್ರವರ್ತನಾ ದಿನ ಕಾರ್ಯಕ್ರಮಕ್ಕೆ ತೆರಳಲು ಬಸ್ ವ್ಯವಸ್ಥೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಮಹಾರಾಷ್ಟçದ ನಾಗಪುರ ದೀಕ್ಷಾ ಭೂಮಿಯಲ್ಲಿ ನಡೆಯಲಿರುವ ಪ್ರವರ್ತನಾ ದಿನ(ವಿಜಯದಶಮಿ ದಿನದಂದು) ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಗೆ ಅ.೧೦ ರಂದು ಬೆಳಿಗ್ಗೆ ೦೭ ಗಂಟೆಗೆ ದೀಕ್ಷಾ ಭೂಮಿ ಯಾತ್ರೆಗೆ ತೆರಳಲು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ ಅವರು ತಿಳಿಸಿದ್ದಾರೆ.
ಆಯ್ಕೆಯಾದ ಅನುಯಾಯಿಗಳು ಬಳ್ಳಾರಿ (ಹಳೆ ಜಿಲ್ಲಾಧಿಕಾರಿಗಳ ಕಚೇರಿ), ಸಿರುಗುಪ್ಪ (ಹೈಸ್ಕೂಲ್ ಮೈದಾನ), ಸಂಡೂರು (ತಾಲ್ಲೂಕು ಪಂಚಾಯತ್ ಕಚೇರಿ) ಹಾಗೂ ಕಂಪ್ಲಿ (ತಹಶೀಲ್ದಾರ ಕಚೇರಿ) ತಾಲ್ಲೂಕುಗಳಿಂದ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಯ್ಕೆಯಾದ ಅರ್ಹ ಯಾತ್ರಾರ್ಥಿಗಳು ಅಂದು (ಅ.೧೦ ರಂದು) ಬೆಳಿಗ್ಗೆ ೦೭ ಗಂಟೆಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಿಗಧಿಪಡಿಸಿದ ಸ್ಥಳಕ್ಕೆ ಹಾಜರಿರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.