WhatsApp Image 2024-08-29 at 6.28.30 PM

ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ : ಎ ಮಾನಯ್ಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 29- ಬಡವರ ಪರ ದಲಿತ ಮತ್ತು ಹಿಂದುಳಿದ ವರ್ಗಗಳ ಪರ ಉತ್ತಮವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರನ್ನು ಪದಚ್ಯಿತಿಗೊಳಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸಲು ಯತ್ನಿಸುತ್ತಿರುವ ರಾಜ್ಯಪಾಲರನ್ನು ಶೀಘ್ರವೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣದ. ಏ ಮಾನಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ ಹೆಚ್ಚುತ್ತಿರುವ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಕರ್ನಾಟಕರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ನವದೆಹಲಿಯಲ್ಲಿರುವ ರಾಷ್ಟ್ರಪತಿಗಳಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇತ್ತೀಚಿಗೆ ತಿಂಗಳಿಂದ ಕಾಂಗ್ರೆಸ್‌ ಪಕ್ಷದ ರಾಜ್ಯ ಆಡಳಿತದ ಮೇಲೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿ.ಜೆ.ಪಿಯೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡ ಜೆ.ಡಿ.ಎಸ್ ಪಕ್ಷವು ಸೇರಿಕೊಂಡು ಕರ್ನಾಟಕ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಅಸ್ಥಿರತೆಗೊಳಿಸಬೇಕೆಂಬ ದುರುದ್ದೇಶದಿಂದ ರಾಜ್ಯಪಾಲರ ಮೂಲಕ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ತೊಂದರೆ ನೀಡುವ ಹುನ್ನಾರ ನಡೆಸಲಾಗಿದೆ. ಕೇಂದ್ರ ಬಿ.ಜೆ.ಪಿ ಸರಕಾರಕ್ಕೆ ಮಣಿದ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

ಅತ್ಯಂತ ಉನ್ನತವಾದ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ ಮತ್ತು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬರುತ್ತದೆ. ರಾಜ್ಯರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರಕಾರದ ಕೈಗೊಂಬೆಯಂತೆ -ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಸರಕಾರವನ್ನು ಅಸ್ಥಿರಗೊಳಿಸಲು ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳಿಗೆ ಬೆಂಬಲ ನೀಡುತ್ತಿದ್ದಾರೆ. ಜೊತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಪ್ರಕಾರ ಅನುಮತಿ ನೀಡುವ ವೇಳೆ ಪಾಲಿಸಬೇಕಾಗಿರುವ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. 2021 ನೇ ಸೆಪ್ಟೆಂಬರ್ 3ರಂದು ಕೇಂದ್ರ ಸರಕಾರದಿಂದ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗಿದೆ. ಆದರೆ ಇದನ್ನು ಪರಿಗಣಿಸಿಲ್ಲ. ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ಪ್ರತಿನಿಧಿಯಾಗಿದ್ದು ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಲು ಸೂಚಿಸಬೇಕೆಂದು ಮನವಿ ಪತ್ರದಲ್ಲಿ ರಾಷ್ಟ್ರಪತಿಗಳನ್ನು ಕೋರಿದ್ದಾರೆ.

ಸಾಂವಿಧಾನಿಕವಾಗಿ ಅತ್ಯಂತ ಉನ್ನತ ಹುದ್ದೆಯಲ್ಲಿರುವ ರಾಜ್ಯಪಾಲರು ಕೇಂದ್ರ ಸರಕಾರ ಹಾಗು ಬಿ.ಜೆ.ಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವದು ಅಕ್ಷಮ್ಯ ಅಪರಾಧ ಮಾಡಿದಂತೆ ಆಗುತ್ತದೆ, ರಾಜ್ಯಪಾಲರ ಈ ನಡೆಯನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ. ಇನ್ನು ಕೇಂದ್ರ ಸರಕಾರ ಅನಗತ್ಯವಾಗಿ ಜನಾರ್ಶೀವಾದದಿಂದ ರಚನೆಯಾಗಿರುವ ರಾಜ್ಯ ಕಾಂಗ್ರೇಸ್ ಸರಕಾರವನ್ನು ಅಸ್ಥಿರಗೊಳಿಸಿ ಹಿಂಬಾಗಿಲ ಮೂಲಕ ಅಧಿಕಾರವನ್ನು ಹಿಡಿಯಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಗೌರವಾನ್ವಿತ ರಾಷ್ಟ್ರಪತಿಗಳು ಇದನೆಲ್ಲವನ್ನು ಪರಿಗಣಿಸಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು, ಸಂಪೂರ್ಣ ಬಹುಮತ ಹೊಂದಿರುವ ಕರ್ನಾಟಕ ರಾಜ್ಯಕಾಂಗ್ರೆಸ್‌ ಪಕ್ಷದ ಸರಕಾರವನ್ನು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಜರುಗಬೇಕೆಂದು ವಿನಂತಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಯ ಸಂಚಾಲಕ ಹೆಚ್.ಬಿ.ಗಂಗಪ್ಪ, ಜಿಲ್ಲಾಸಂಘಟನಾ ಸಂಚಾಲಕರಾದ ಹೆಚ್.ದೇವದಾಸ್, ಹೆಚ್.ಆಂಜಿನೇಯ, ಕೊಳಗಲ್ ಮಲ್ಲಯ್ಯನರಸಪ್ಪ, ಚಲುವಾದಿ ಸಂಘ, ಜಿ. ಪಂಪಾಪತಿ ಕುಡುತಿನಿ, ಮಲ್ಲಿಕಾರ್ಜುನ, ಮಹೇಶ್ ಇಂದಿರಾ ನಗರ, ಹೆಚ್. ನಾಗೇಂದ್ರಪ್ಪ ದೀಪಾ ಪ್ರಿಂಟರ್, ಬಿಸಲಹಳ್ಳಿ ರಮೇಶ್, ಹೆಚ್.ಮಲ್ಲಪ್ಪ, ಹೆಚ್. ಶಂಕರ್, ಆರ್.ಎಮ್. ರಾಮಯ್ಯ ಕಂಪ್ಲಿ, ಜಗದೀಶ್ ಮೆಟ್ರಿ, ಕುಮಾರ್‌ ಮೆಟ್ಟಿ, ಮಾರೆಪ್ಪ, ಎಮ್.ರಮೇಶ್ ಇಂದಿರಾ ನಗರ, ಹಲಕುಂದಿ ಎರಿಸ್ವಾಮಿ, ಮಹೇಶ್ ಬತ್ತಿ, ಹನುಮಂತ ಎತ್ತಿನಬೂದಿಹಾಳ್, ಟಿ.ಎಮ್.ಎರಿಸ್ವಾಮಿ, ಹೆಚ್.ಕೆ. ತಿರುಮಲ ಎರಗುಡಿ, ಶಿವು ಅಸುಂಡಿ, ಏ.ಕೆ ಗಂಗಾಧರ, ವೇಣಿ ವೀರಾಪುರ, ಹನುಮಂತ ಕುಡುತಿನಿ, ಭೀಮ ಶಂಕರ್, ಪರಶುರಾಮ್ ಸಿದ್ದಾರ್ಥ್ ನಗರ, ಸಿ. ಗಂಗಾಧರ ಬೆಳ್ಳಗುರ್ಕಿ, ವಿಜಯ್, ಜಾನ್ ಟೈಲರ್ , ಹೊನ್ನೂರಸ್ವಾಮಿ ಬೀಸಲಹಳ್ಳಿ, ಸಂಚಾಲಕರಾದ ಹೆಚ್. ಆಂಜಿನೇಯ, ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಲ್ ಮಲ್ಲಯ್ಯ ಹಲವರು ಇದ್ದರು.

Leave a Reply

Your email address will not be published. Required fields are marked *

error: Content is protected !!