22gvt1

ಅಯೊಧ್ಯೇಯ ಶ್ರೀರಾಮ ದೇವರು ಸರ್ವರಿಗೂ ಅನುಗ್ರಹಿಸಿಸಲಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 22- ಜಾತ್ಯಾತೀತ ವೆಂದು ಹೆಳಿ-ಜಾತಿ ಗಣತಿ ಮಾಡುವುದು ಸಮಂಜಸವಲ್ಲ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತಿರ್ಥರು ಹೇಳಿದರು.

ಅವರು -ನಗರದ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತಿರ್ಥರು ವ್ಯವಸ್ಥಾಪಕ ಸಾಮವೇಧ ಗುರುರಾಜಾಚಾರ್ಯ ಗೌರವ ಸರ್ಮಪಣೆ ಸ್ವಿಕರಿಸಿ ಮಾತನಾಡಿ ಸರಕಾರಗಳು ಹೇಳುವುದು ಒಂದು ಮಾಡುವುದು ಇನ್ನೂಂದು ಎನ್ನುವ ಹಾಗೇ ಆಗಿದೆ.

ಜಾತ್ಯಾತೀತ ರಾಷ್ಠ ನಮ್ಮದು ಹೇಳುವವರು ಜಾತಿ ಮೂಲಕ ವಿಭಜನ ಮಾಡುವುದು ಸರಿನಾ ಅವರೇ ಪರಾಮರ್ಶೇ ಮಾಡಿಕೊಳ್ಳಲಿ. ಎಲ್ಲರೂ ಒಂದು ದೇಶ ನಮ್ಮದು ರಾಷ್ಠು ನಮ್ಮದು ಎಂಬ ಪರಿಕಲ್ಪನೆಯಡಿ ಜೀವಿಸುವುದು ಉತ್ತಮ ವಾಗಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ತಾರಕ ಮಂತ್ರ ಜಪಿಸಿ ಇಡಿ ದೇಶದ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದವೆ. ಶ್ರೀರಾಮ-ಕೃಷ್ಣರು ಸರ್ವರನ್ನು ಅನುಗ್ರಹಿಸಲಿ ಗುರರಾಯರ ಅನುಗ್ರಹದಿಂದ ಲೋಕ ಕಲ್ಯಾಣವಾಗಲಿ ಎಂದರು.

ಈಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ಯಾಮಚಾರ್ಯ ಜೋಶಿ,ಶ್ರೀಗಳವರ ಆಪ್ತಕಾರ್ಯದರ್ಶಿ ಕೃಷ್ಣ ಆಚಾರ್ಯಉಡುಪಿ,ಪೇಜಾವರ ವಿದ್ಯಾಪೀಠದ ಮುಖಸ್ಥ ವಾದಿರಾಜಾಚಾರ್ಯ ಕಲ್ಮಂಗಿ, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಾಮವೇಧ ಗುರುರಾಜಾಚಾರ್ಯ, ಕಾರಟಗಿ ರಾಯರ ಮಠದ ವ್ಯವಸ್ಥಾಪಕ ಉದಯ ಜಹಾಗಿರದಾರ,ದಾಸನಾಳ ಶ್ರೀನಿವಾಸ, ಅಪ್ಪಣ( ಜಗನ್ನಾಥ) ದೇಶಪಾಂಡೆ,ದಾಸನಾಳ ಶ್ರೀನಿವಾಸ,ಲಕ್ಷ್ಮೀಕಾಂತ ಹೇರೂರ, ರಾಘವೇಂದ್ರ ದೇಶಪಾಂಡೆ, ಸ್ವಾಮಿರಾವ ಹೇರೂರ, ಶ್ರೀಪಾದ ದಾಸನಾಳ ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!