
ಶ್ರೀ ನಗರೇಶ್ವರ ದೇವರಿಗೆ ಕಾರ್ತಿಕೋತ್ಸವದ ಸಂಭ್ರಮ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 5- ಇಲ್ಲಿನ ಆರ್ಯವೈಶ್ಯ ಸಮಾಜದ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಥಮ ಸೋಮವಾರದಂದು. ಶ್ರೀ ನಗರೇಶ್ವರ ದೇವರಿಗೆ ಕಾರ್ತಿಕೋತ್ಸವ ಸಮಾರಂಭವನ್ನು ಆಯೋಜಿಸಲಾಯಿತು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀಮತಿ ರೂಪಾ ರಾಣಿ ದಂಪತಿಗಳು ಹಾಗೂ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ಭಾಗ್ಯ ಈಶ್ವರ ಶೆಟ್ಟಿ. ದಂಪತಿಗಳು ಕಾರ್ತಿಕ ದೀಪೋತ್ಸವದ ಸಂಕಲ್ಪವನ್ನು ದೇವಸ್ಥಾನದ ಅರ್ಚಕ ದಿಗಂಬರ್ ಭಟ್ ನೆರವೇರಿಸಿದರು.
ಆರ್ಥಿಕ ಭಾಷೆಯ ಕಾರ್ತಿಕ ಉತ್ಸವದ ಮಹತ್ವ ಕುರಿತು ಅರ್ಚಕ ದಿಗಂಬರ್ ಭಟ್ ಮಾತನಾಡಿ. ಜ್ಯೋತಿ ಜ್ಞಾನದ ಸಂಕೇತವಾಗಿದ್ದು ಮನುಷ್ಯನಲ್ಲಿರುವ ಅಜ್ಞಾನ ಅಂಧಕಾರವನ್ನು ಕಳೆದು ಜ್ಞಾನಬೆಳೆಸುವ ಕಾರ್ಯವಾಗಿದೆ ಎಂದು ತಿಳಿಸಿದರು.
ಬಳಿಕ ಅಷ್ಟವಧಾನ ಸೇವೆ, ಭಜನೆ, ಪಲ್ಲಕ್ಕಿ ಉತ್ಸವ, ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಮಾಜ ಬಾಂಧವರು ಹಾಗೂ ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು