
ಶ್ರೀ ದುರ್ಗಾದೇವಿ ಜಾತ್ರೋತ್ಸವದ ಸಂಭ್ರಮ
ಕರುನಾಡ ಬೆಳಗು ಸುದ್ದಿ
ಕುಕನೂರು, 21- ಕೋಳಿಪೇಟೆ ಶ್ರೀ ದುರ್ಗಾದೇವಿ ಜಾತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ ಮಂಗಳವಾರ ಜರುಗಿತು.
ಕೋಳಿಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ದೇವಿಯ ವರ್ಣರಂಜಿತ ಮೂರ್ತಿಯನ್ನು ಹೂಗಳಿಂದ ಅಲಂಕಾರಗೊಳಿಸಿ ಯುವಕರು ದೇವಿಯ ರಥವನ್ನು ಹೊತ್ತು ಪಟ್ಟಣದ ಮುಖ್ಯಬೀದಿಗಳಲ್ಲಿ ಉದೋ ಉದೋ ಎಂದು ಜಯಂಕರ ಕುಗುತ್ತ ಸಾಗಿದರು ಮೆರವಣಿಗೆಯು ಶಿರೂರು ವೀರಭದ್ರಪ್ಪ ವೃತ್ತ ದ ರವರೆಗೂ ಸಾಗಿ ನಂತರ ಕೊಂಡಕ್ಕೆ ಹೋಗಿ ದೇವಿಗೆ ಪೂಜೆ ಸಲ್ಲಿಸಲಾಯಿತು.ಜಾತ್ರೆಯಲ್ಲಿ ದೇಶಿಯ ನೃತ್ಯ ಕಲಾ ತಂಡದವರು.
ಡೊಳ್ಳು.ಭಜನೆ ನಾಗರೇ ತಂಡ ದವರು ನೋಡುಗರ ಕಣ್ಮನ ಸೆಳೆಯುವಂತಿತ್ತು ರಸ್ತೆಗುಂಟ ಭಕ್ತಾದಿಗಳು ದೇವಿಗೆ ಹೂವು ಹಣ್ಣು ಉತ್ತತ್ತಿ ಕಾಯಿ ಕರ್ಪೂರ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಮಹಿಳೆಯರಿಂದ ಕುಂಭಮೇಳ ಕಳಸದಾರತಿ ಜರುಗಿತು.
ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ದೇವಿಗೆ ಕಾಯಿ ಕರ್ಪೂರ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಪುನೀತರಾದರು ನಂತರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಜರುಗಿತು ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿಯವರು ಸರ್ವ ಭಕ್ತಾದಿಗಳು ಪಾಲ್ಗೊಂಡಿದ್ದರು.