6

ಚನ್ನಮ್ಮ ಸರ್ವಕಾಲಿಕ ಚಿಲುಮೆ : ಬಸನಗೌಡ ದೇಸಾಯಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 25- ಭಾರತ ದೇಶದಲ್ಲಿ ಬ್ರಿಟಿಷರ ವಿರುದ್ಧ ಮೊದಲು ದಂಗೆ ಎದ್ದು ಹೋರಾಟ ಮಾಡಿದವರು ಕಿತ್ತೂರು ರಾಣಿ ಚನ್ನಮ್ಮ, ಇವರು ಭಾರತದ ಸ್ವಾತಂತ್ರö್ಯ ಹೋರಾಟದ ಇತಿಹಾಸದಲ್ಲಿ ಸರ್ವಕಾಲಿಕ ಚಿಲುಮೆ ಎಂದು ಯಲಬುರ್ಗಾ ತಾಲೂಕಾ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಬಸನಗೌಡ ಎಂ.ಪಾಟೀಲ (ಬಹದ್ದೂರ ದೇಸಾಯಿ) ಹೇಳಿದರು.

ಅವರು ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮನವರ ೨೪೬ನೇ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಚನ್ನಮ್ಮನವರು ಯಾವುದೇ ಒಂದು ಜಾತಿಗೆ ಹಾಗೂ ಪಂಗಡಕ್ಕೆ ಸೇರಿದವರಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರಮುಡಿ ಗ್ರಾಮಪಂಚಾಯತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ, ತಾಲೂಕಿನ ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಇಂದು ಎಲ್ಲ ಜಾತಿಗಳಲ್ಲಿಯೂ ಮಹಾನ್ ಪುರುಷರು ತಮ್ಮದೇ ಆದ ತತ್ವ ಸಿದ್ಧಾಂತಗಳನ್ನು ನೀಡಿದ್ದಾರೆ. ಇಂತಹ ಮಹನೀಯರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಚನ್ನಮ್ಮ ಎಲ್ಲ ಜಾತಿಯ ಜನರಿಗೆ ಆದರ್ಶ ಮಹಿಳೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮದ ಹಿರಿಯರಾದ ಶರಣಪ್ಪ ಸಿರಿಗಿರಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ರಾಜು ನಿಂಗೋಜಿ, ಹೋರಾಟಗಾರ ಶರಣಪ್ಪ ರಾಂಪುರ ಮಾತನಾಡಿ ಇಂದು ಸರಕಾರ ಪಂಚಮಸಾಲಿ ಸಮಾಜದವರಿಗೆ ೨-ಎ ಮೀಸಲಾತಿ ನೀಡುವಲ್ಲಿ ಮೀನ-ಮೇಷ ಎಣಿಸುತ್ತಿರುವುದು ಖಂಡನಾರ್ಹ ಸಂಗತಿ. ಕೂಡಲೇ ಬಡ ಪಂಚಮಸಾಲಿಗಳಿಗೆ ಮೀಸಲಾತಿ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಗ್ರಾಮದ ಹಿರಿಯರಾದ ಮಂಜುನಾಥ ತೋಟರ, ಬಸವರಾಜ ಪಟ್ಟೇದ, ಬಸವರಾಜ ಬೂದಿಹಾಳ, ಬಸವರಾಜ ಮುದಿಮಲ್ಲ, ಬಸವರಾಜ ಲಿಂಗಣ್ಣವರ, ಬಸವರಾಜ ವಾರಿ, ಗವಿಸಿದ್ಧಪ್ಪ ಪಟ್ಟೇದ ಮಲ್ಲಪ್ಪ ಬೂದಿಹಾಳ, ಬಸವರಾಜ ಕಳಕಪ್ಪನವರ, ಗವಿಸಿದ್ಧನಗೌಡ ಪಾಟೀಲ, ವೀರೇಶ ಬಂಡ್ರಿ, ಶೇಖರಗೌಡ ಮುಳಗೌಡ್ರ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!