2

ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ : ಶಿವಲೀಲಾ ವನ್ನೂರು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ತಾಲ್ಲೂಕಿನ ವನಬಳ್ಳಾರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಅರಸನಕೇರಿ ಮತ್ತು ಅರಸನಕೇರಿ ತಾಂಡದಲ್ಲಿ ಮಕ್ಕಳ ಬಾಲ್ಯ ವಿವಾಹ ನಿಶ್ಚಿತಾರ್ಥವಾಗಿರುವ ಕುರಿತು ಮಾಹಿತಿಯನ್ನು ಮಕ್ಕಳ ಸಹಾಯವಾಣಿ ೧೦೯೮ ಕ್ಕೆ ಹಾಗೂ ಸ್ಪಂದನ ಸಂಸ್ಥೆಗೆ ಮಾಹಿತಿ ಬಂದಿತ್ತು ಹಾಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಮಕ್ಕಳ ಸಹಾಯವಾಣಿ ತಂಡ ಮತ್ತು ಸ್ಪಂದನ ಸಂಸ್ಥೆಯ ಸಿಬ್ಬಂದಿಗಳ ತಂಡ ಹಾಗೂ ವನಬಳ್ಳಾರಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಅವರ ಸಿಬ್ಬಂದಿಗಳು ಗ್ರಾಮಕ್ಕೆ ಬೇಟಿ ನೀಡಿದರು.

ಮಗುವಿನ ಕುಟುಂಬದವರಿಗೆ ಬಾಲ್ಯ ವಿವಾಹ ಮಾಡದೆ ಇರುವಾಗೆ ತಿಳಿಸಿ ಮನವೊಲಿಸಿ ೧೮ ಆಗುವವರೆಗೆ ಮದುವೆ ಮಾಡದಿರಲು ಮತ್ತು ಮಗುವಿನ ಭವಷ್ಯ ಮತ್ತು ಮಗುವನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಮಗುವಿಗೆ ಆಗುವ ತೊಂದರೆ ಮತ್ತು ಬಾಲ್ಯ ವಿವಾಹ ಮಾಡಿದ ಮೇಲೆ ಅವರಿಗೆ ನಿಡುವ ಕಠೀಣ ಶಿಕ್ಷೆಯ ಕುರಿತು ತಿಳಿಸಿ ಮಗುವಿನ ಸಮೇತ ಪೊಷಕರು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಲು ನೋಟಿಸ್ ಕೊಟ್ಟು ಅವರಿಗೆ ತಿಳಿಸಲಾಯಿತು.

ಆ ಒಂದು ಗ್ರಾಮದ ಮದ್ಯೆ ಇರುವ ಕಟ್ಟಿಯ ಹತ್ತಿರ ಗ್ರಾಮದ ಜನರಿಗೆ ಬಾಲ್ಯ ವಿವಾಹ ಯಾಕೆ ಮಾಡಬಾರದು ಮತ್ತು ಮಾಡಿದರೆ ಆಗುವ ಪರಿಣಾಮ ಏನು ಮತ್ತು ಶಿಕ್ಷೆಯ ಕುರಿತು ಅಷ್ಟೆ ಅಲ್ಲದೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸೇವೆಯ ಕುರಿತು ಮಕ್ಕಳ ಕಲ್ಯಾಣ ಸಮಿತಿಯ ಕಾರ್ಯಯೋಜನೆ ಅದರ ಒಂದು ನಿಯಮಗಳನ್ನು ಅಲ್ಲದೆ ಮಕ್ಕಳ ರಕ್ಷಣೆಯ ಸ್ವರೂಪವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಶ್ರೀಮತಿ ಶಿವಲೀಲಾ ವನ್ನೂರು ಅವರು ಗ್ರಾಮದ ಜನರಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾದಂತಹ ಮಾಹಿತಿಯನ್ನು ಕರಪತ್ರದ ಮೂಲಕ ದತ್ತು ಮಕ್ಕಳ ಕುರಿತು ಕೂಡ ಜಾಗೃತಿ ಮೂಡಿಸಿ ನಿಮ್ಮ ಊರಿನಲ್ಲಿ ಯಾವುದೆ ಮಗುವಿನ ಬಾಲ್ಯವಿವಾಹ ಆಗದೆ ಇರುವಾಗೆ ನೋಡಿಕೊಳ್ಳಲು ನಿವೆಲ್ಲರೂ ಸಹ ಜವ್ಹಾಬ್ದಾರರು ಎಂದು ಒತ್ತಾಯಿಸಿದರು.

ಬಾಲ್ಯ ವಿವಾಹಕ್ಕೆ ಒಳಗಾಗಿರುವ ಮಕ್ಕಳು ಈಗಾಗಲೆ ಬಾಲ ಗರ್ಭಿಣಿಯರಾಗಿದ್ದಾರೆ. ಕೆಲವು ಹಳ್ಳಿಗಳಲ್ಲಿ ರಾತ್ರೊರಾತ್ರಿ ಮದುವೆ ಮಾಡಿ ಅವರ ಮೇಲೆ ಕೆಸ್ ಆಗಿರುವ ಕುರಿತು ಉದಾಹರಣೆ ಮೂಲಕ ಜಾಗೃತಿ ಹೊಂದಲು ಮತ್ತು ನವಜಾತ ಶಿಶುಗಳನ್ನು ಮತ್ತು ಮಕ್ಕಳನ್ನು ಬೀದಿಯಲ್ಲಿ ಬಿಸಾಕುವುದು ಕಂಡುಬAದಲ್ಲಿ ಬೇಡವಾದ ಮಗು ನಿಮಗೆ ನಿಮ್ಮ ಗಮನಕ್ಕೆ ಬಂದಲ್ಲಿ, ಬಾಲ್ಯ ವಿವಾಹ ಮಾಡುವ ವಿಷಯ ತಿಳಿದು ಬಂದಲ್ಲಿ (೧೦೯೮) ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ).

ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ರಾಘವೇಂದ್ರ ಮತ್ತು ಲತಾ, ಸ್ಪಂದನ ಸಂಸ್ಥೆಯ ಯೋಜನಾ ಸಂಯೋಜಕ ಶಂಕರ್, ಸುರಳ್ ಸಮುದಾಯ ಸಂಘಟಕ ಕೃಷ್ಣ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಮತ್ತು ಗ್ರಾಮದ ಜನರು ಉಪಸ್ಥಿತರಿದ್ದರು.

ಮಕ್ಕಳನ್ನು ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!