
ಮಕ್ಕಳು ಮಹನೀಯರ ಸಾಧನೆಯಂತ ಕನಸು ಕಟ್ಟಿಕೊಳ್ಳಬೇಕು : ರೂಪ್ಲಾ ನಾಯ್ಕ್
ಕರುನಾಡ ಬೆಳಗು ಸುದ್ದಿ
ಮರಿಯಮ್ಮನಹಳ್ಳಿ, 2- ಹೋಬಳಿಯ ಗೊಲ್ಲರಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜಯಂತಿ ಆಚರಿಸಲಾಯಿತು.
ಜಯಂತಿ ಉದ್ದೇಶಿಸಿ ಮುಖ್ಯ ಗುರುಗಳಾದ ರೂಪ್ಲಾನಾಯ್ಕ್ ಮಾತನಾಡಿ ಮಕ್ಕಳಿಗೆ ಇಂದು ಶಿಕ್ಷಣದ ಅಗತ್ಯ ಅವಶ್ಯವಾಗಿದೆ, ವಿದ್ಯಾಭ್ಯಾಸದ ಜೊತೆಗೆ ಮಹನೀಯರ ಸಾಧನೆಗಳಂತಹ ಕನಸುಗಳನ್ನು ಕಟ್ಟಿಕೊಳ್ಳಬೇಕು, ಪೂರಕವಾಗಿ ಪೋಷಕರೂ ಸಹ ಅವರ ಒಳ್ಳೆ ಕನಸುಗಳು ನನಸಾಗಲು ಸಹಕರಿಸಬೇಕು. ಮಕ್ಕಳನ್ನು ಸಮಾಜದಲ್ಲಿ ಅತ್ಯುತ್ತಮ ವ್ಯಕ್ತಿಗಳನ್ನಾಗಿಸಲು ಪ್ರಮುಖ ಪಾತ್ರ ವಹಿಸಬೇಕು ಎಂದು ಶಿಕ್ಷಣದ ಮಹತ್ವಕುರಿತು ತಿಳಿಸಿದರು.
ಎ.ಸ್ಡಿ.ಎಂ.ಸಿ ಅಧ್ಯಕ್ಷರು ಸಾವಿತ್ರಿ ಮಂಜುನಾಥ, ಉಪಾಧ್ಯಕ್ಷರು ಕೆ. ನಾಗರಾಜ್, ಸದಸ್ಯರಾದ ಕೋರಿ ರಾಮಾಂಜನಿ, ಶಿಕ್ಷಕರಾದ ಪಕ್ಕೀರಜ್ಜ, ವೆಂಕಟೇಶ್, ಉಮೇಶ್, ಪ್ರವೀಣ್ ಕುಮಾರ್, ನೀಲಮ್ಮ, ನಾಗವೇಣಿ, ರೂಪಾ, ಭಾಗ್ಯಶ್ರೀ,ಅರುಂದತಿ,ಶ್ರೀದೇವಿ, ಕೊಟ್ರಮ್ಮ, ಚೈತ್ರಾ, ಕರಿಯಮ್ಮ ಇದ್ದರು.