1

ಶಾಲಾ ಮಕ್ಕಳು ವ್ಯವಹಾರಿಕ ಜ್ಞಾನ ತಿಳಿಯಲು ಮಕ್ಕಳ ಸಂತೆ ಅತ್ಯವಶ್ಯ : ಹೊಸಮನಿ

ಕರುನಾಡ ಬೆಳಗು ಸುದ್ದಿ

ಕುಕನೂರು 16- ಶಾಲಾ ಮಕ್ಕಳು ವ್ಯವಹಾರಿಕ ಜ್ಞಾನ ತಿಳಿಯಲು ಮಕ್ಕಳ ಸಂತೆ ಕಾರ್ಯಕ್ರಮ ಮಾಡುವುದು ಅತ್ಯವಶ್ಯವಾಗಿದೆ ಎಂದು ಶರಣಪ್ಪ ಹೊಸಮನಿ ವಿದ್ಯಾನಂದ ಗುರುಕುಲ ಆಡಳಿತ ಅಧಿಕಾರಿ ಹೇಳಿದರು.

ಪಟ್ಟಣದ ವಿದ್ಯಾನಂದ ಗುರುಕುಲ ಶಿಕ್ಷಣ ವಿಶ್ವಸ್ಥ ಮಂಡಳಿಯ ಅಂಗ ಸಂಸ್ಥೆಯಾದ ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಶರಣಪ್ಪ ಹೊಸಮನಿ ವಿದ್ಯಾನಂದ ಗುರುಕುಲದ ಆಡಳಿತ ಅಧಿಕಾರಿ ಮಾತನಾಡಿ, ಮಕ್ಕಳಿಗೆ ಸಾಮಾಜಿಕ ಪ್ರಜ್ಞೆ, ಮಾರುಕಟ್ಟೆಯ ವಸ್ತುಗಳ ವಿಭಿನ್ನವಾದ ಪರಿಚಯಕ್ಕಾಗಿ ಈ ದಿನ ಮಕ್ಕಳ ಸಂತೆ ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಮಾಡಿದ್ದೇವೆ. ಶಾಲಾ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ವ್ಯವಹಾರಿಕ ಜ್ಞಾನ ತಿಳಿಯಲು ಈ ದಿನ ಮಕ್ಕಳ ಸಂತೆ ಎಂಬ ವಿಭಿನ್ನ ಕಾರ್ಯಕ್ರಮವನ್ನು ಶಾಲಾಯ ಶಿಕ್ಷಕರು ಮಾಡುತ್ತಿರುವುದು ತುಂಬಾ ಉತ್ತಮವಾದ ಕಾರ್ಯವಾಗಿದೆ. ಪೋಷಕರು ಕೂಡ ಮಕ್ಕಳ ವ್ಯವಹಾರಿಕ ಜ್ಞಾನಕಾಗಿ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಮಕ್ಕಳ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಪ್ರತಿಯೊಬ್ಬ ಮಕ್ಕಳ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಂಬಾ ಕಷ್ಟಪಟ್ಟು ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಾರೆ ಅದಕ್ಕಾಗಿ ಪ್ರತಿಯೊಬ್ಬ ಮಕ್ಕಳು ಪೋಷಕರ ಮನೋಭಾವನೆಯನ್ನು ಅರಿತುಕೊಂಡು ಉತ್ತಮವಾದ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ್ ದೇಸಾಯಿ, ನರಹರಿ ದಿಕ್ಷಿತ್, ದೀಕ್ಷಾ, ಸೋಮಶೇಖರ್ ನಿಲೋಗಲ್, ಪೀರ್ ಸಾಬ್ ದಫೇದಾರ್ ಸಿಆರ್ ಪಿಸಿಆರ್‌ಸಿ ಕುಕನೂರ ನಗರ, ಕಳಕಪ್ಪ ಕುಂಬಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕುಕನೂರ, ಬಸವರಾಜ ಕಂಪ್ಲಿ, ಶಾಲಾ ಶಿಕ್ಷಕರ ಸಿಬ್ಬಂದಿ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!