
ತಾಯಿ-ಮಗು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ
ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವು : ಜನರ ಆಕ್ರೋಶ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 18- ಪಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತಾಯಪ್ಪ ರವರ ಹೆಂಡತಿಯ ಹೆರಿಗೆ ಚಿಕಿತ್ಸೆಗೆಂದು ನಗರದ ತಾಯಿ-ಮಕ್ಕಳ ಹೆರಿಗೆ ಆಸ್ಪತ್ರೆಕರೆತರಲಾಗಿದ್ದು. ವೈದ್ಯರ ನಿರ್ಲಕ್ಷತೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದರಿಂದ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಸ್ಪತ್ರೆಮುಂದೆ ಪ್ರತಿಭಟನೆ ನಡೆಸಿದರು.
ನಡೆದಿದ್ದೇನು : ಪಿ.ಕೆ.ಹಳ್ಳಿ ಗ್ರಾಮದಿಂದ ನಗರಕ್ಕೆ ತಡ ರಾತ್ರಿಯಲ್ಲಿ ಆಸ್ಪತ್ರೆಗೆ ಬರುವ ದಾರಿಯಲ್ಲಿ ಅಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದೆ. ಆದರೆ ಆಸ್ಪತ್ರೆಗೆ ಬಂದ ಹೆರಿಗೆ ಪೆಶೆಂಟ್‌ನ್ನು ವೈದ್ಯರು ಅಡ್ಮಿಟ್ ಮಾಡಿಕೊಳ್ಳದೆ ಬೇಜವಾಬ್ದಾರಿ ತನದದಿಂದ ಮಗುವಿನ ಉಸಿರಾಟ ತೊಂದರೆ ಉಂಟಾಗಿದೆ ಬೆಳೆಗ್ಗೆವರೆಗೆ ಕಾಯಿರಿ ಡಾಕ್ಟಾರ್ ಇಲ್ಲ ಅವರು ಬಂದು ನೋಡುತ್ತಾರೆ ಎಂದು ಇಲ್ಲಿನ ನರ್ಸ್ ಹೇಳಿದ್ದರಿಂದ ಕುಟುಂಬಸ್ಥರು ಬೆಳಿಗ್ಗೆವರೆಗೆ ಹಾಗೆ ಕಾದು ಕುಳಿತು ಹೆರಿಗೆ ಪೆಶೆಂಟ್‌ನ ಸಂಬಂದಿಕರಿಗೆ ವೈದ್ಯರು ಬೆಳಿಗ್ಗೆ ಬಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿದ್ದಾರೆ. ಕೊಪ್ಪಳ ಆಸ್ಪತ್ರೆಗೆ ಹೋದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಇದರಿಂದ ಜಿಲ್ಲಾಸ್ಪತ್ರೆ ಎಷ್ಟು ಸುರಕ್ಷಿತ ಎಂದು ತಿಳಿದು ಬರುತ್ತದೆ ಎಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಮುಂದೆ ಪ್ರತಿಭಟನೆಗೆ ಮುಂದಾದರು ಇದಕ್ಕೆ ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪನವರ ಪುತ್ರ ಸಾತ್ ಕೊಟ್ಟರು.
ಜಿಲ್ಲಾ ಆಸ್ಪತ್ರೆಯನ್ನು ನಂಬಿಕೊಂಡು ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ನೂರಾರು ಜನ ಪೇಶೆಂಟ್ ಬರುತ್ತಾರೆ ಆದರೆ ಇಲ್ಲಿನ ವೈದ್ಯರಾಗಲಿ, ನರ್ಸ್ ಗಳಾಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಇದು ಪ್ರತಿದಿನದ ವಾಡಿಕೆಯಾಗಿದೆ ಇವರ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿಯಿಂದಾಗಿ ಇಂದು ಮಗುವಿನ ಸಾವಾಗಿದೆ. ಇವರ ಬೇಜವಾಬ್ದಾರಿ ವರ್ತನೆಗೆ ಇನ್ನೆಷ್ಟು ಕಂದಮ್ಮ, ಜೀವಿಗಳು ಬಲಿಯಾಗಬೇಕು ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಧಿಕಾರಿಗಳು ಈ ಕೂಡಲೇ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ತನದ ಕರ್ತವ್ಯ ನಿರ್ವಹಿಸಿದ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು. ಸಾರ್ವಜನಿಕರ ಹಿತ ಕಾಯಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ತುರ್ತು ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಕರ್ತವ್ಯ ನಿರ್ವಹಿಸಲು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ : ಜಿಲ್ಲಾ ವೈಧ್ಯಾಧಿಕಾರಿಯಾದ ಡಾ. ಶಂಕರ್ ನಾಯ್ಕ್ ಭೇಟಿ ನೀಡಿ ಘಟನೆಗೆ ಬಗ್ಗೆ ವಿವರ ಪಡೆದು ವೈದ್ಯರೊಂದಿಗೆ ಸಭೆ ಮಾಡಲಾಗಿ, ರೋಸ್ಟರ್ ಪ್ರಕಾರ ಸ್ಥಳದಲ್ಲೇ ಇದ್ದು ಕರ್ತವ್ಯ ನಿರ್ವಹಿಸಲು ನೋಟೀಸನ್ನು ನೀಡಲಾಗಿದೆ. ಹೆಚ್ಚಿನ ತನಿಖೆಗಾಗಿ ಬೇರೆ ಜಿಲ್ಲೆಯ ವೈದ್ಯರನ್ನು ನೇಮಿಸಲಾಗುವುದು ಎಂದರು ಹೇಳಿದರು.