
ಚುಕ್ಕನಕಲ್ : ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಕೆಯ ಕುರಿತು ಹಾಗೂ ಕಾಮಗಾರಿಗಳ ಬೇಡಿಕೆ ಸ್ವೀಕಾರ ಕುರಿತು ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಮೂಲಕ ಯೋಜನೆಯ ಜಾಗೃತಿ ಕಾರ್ಯಕ್ರಮವು ಕೊಪ್ಪಳ ತಾಲ್ಲೂಕಿನ ಚುಕನಕಲ್ ಗ್ರಾಮದಲ್ಲಿ ನಡೆಯಿತು.
ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ರೈತರ, ಕೂಲಿಕಾರರ, ಮಹಿಳೆಯರ ಸಬಲತೆಗಾಗಿ ಜಾರಿಯಾದ ಯೋಜನೆಯಾಗಿದ್ದು ೧೦೦ ದಿನಗಳ ಕೆಲಸವನ್ನು ನಿರ್ವಹಿಸಬಹುದಾಗಿದೆ. ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಭಾಗವಾಗಿ ೨೦೨೫-೨೬ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಸಲು ಐಇಸಿ ಕಾರ್ಯಕ್ರಮದ ಮನೆ ಮನೆ ಭೇಟಿ ಮೂಲಕ ಕಾಮಗಾರಿಗಳ ಬೇಡಿಕೆಯನ್ನು ಪಡೆಯಲಾಗುತ್ತಿದೆ. ಯೋಜನೆಯಡಿ ಗ್ರಾಮ ಪಂಚಾಯತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಿಸಲು ಅವಕಾಶ ಇರುವದರಿಂದ ಕಾಮಗಾರಿ ಬೇಡಿಕೆಯನ್ನು ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಗ್ರಾಮ ಪಂಚಾಯತಿಗೆ ಸಲ್ಲಿಸಿ ಎಂದು ಹೇಳಿದರು.
ವಿಶೇಷಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.೫೦% ರಿಯಾಯಿತಿ ನೀಡಿದೆ. ಪ್ರತಿ ಸಾಮುದಾಯಿಕ ಕಾಮಗಾರಿಯಲ್ಲಿ ಶೇ.೬೦ರಷ್ಟು ಮಹಿಳೆಯರು ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ.೧೦ರಷ್ಟು ಕೆಲಸದ ಪ್ರಮಾಣದಲ್ಲಿ ವಿನಾಯಿತಿ ಇರುತ್ತದೆ. ಮಹಾತ್ಮಾ ಗಾಂಧಿ ನರೇಗಾದಡಿ ವೈಯಕ್ತಿಕ ಕಾಮಗಾರಿಗಳಾದ ಜಾನುವಾರ ಶೆಡ್, ಮೆಕೆಶೆಡ್, ಕೃಷಿಹೊಂಡ, ಕೋಳಿಶೆಡ್, ಹಂದಿಶೆಡ್, ಬದು ನಿರ್ಮಾಣ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇರುತ್ತದೆ. ಜಮೀನು ಸ್ಥಳಾವಕಾಶ ಇಲ್ಲದವರು ಸಾಮೂಹಿಕ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಿ ಯೋಜನೆಯಡಿ ಕೂಲಿ ಹಣವನ್ನು ಪಡೆಯಬಹುದಾಗಿದೆ. ಮಹಿಳಾ ಭಾಗವಹಿಸುವಿಕೆ ಹೆಚ್ಚಳಕ್ಕೆ ಪ್ರೋತ್ಸಾಹಿಸಲು ಮಹಿಳಾ ಕಾಯಕ ಬಂಧುಗಳ ನೇಮಕವಾಗಲು ಪ್ರತಿ ಪುರುಷ ಕಾಯಕ ಬಂಧುವಿಗೆ ರೂ.೪ ಹಾಗು ಮಹಿಳಾ ಕಾಯಕ ಬಂಧುವಿಗೆ ರೂ.೫ ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಬಹದ್ದೂರಬಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಲ್ಲಪ್ಪ ತಳವಾರ ಮಾತನಾಡಿ ಗ್ರಾಮ ಪಂಚಾಯತಿ ಹಾಗು ಅನುಷ್ಠಾನ ಇಲಾಖೆಯ ಕಾಮಗಾರಿಗಳ ಬೇಡಿಕೆ ಪಡೆದ ಮೇಲೆ ವಾರ್ಡಸಭೆ, ಗ್ರಾಮಸಭೆಯಲ್ಲಿ ಅನುಮೋದನೆ ಪಡೆದು ೨೦೨೫-೨೬ನೇ ಸಾಲಿನ ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸಿ ಜಿಲ್ಲಾ ಪಂಚಾಯತಿಯಿAದ ಅನುಮೋದನೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಚಂದ್ರಪ್ಪ ರಾಠೋಡ, ವಿದ್ಯಾಶ್ರೀ ಮಾರುತಿ ಹರಿಜನ, ಕಮಲಮ್ಮ ಸೋಮಪ್ಪ ವಾಲಿಕಾರ, ಗ್ರಾಮ ಕಾಯಕ ಮಿತ್ರ ಭಾಗ್ಯಶ್ರೀ ಹಾದಿಮನಿ, ಕಾಯಕ ಬಂಧು ಮರಿಯಪ್ಪ, ಅನಿತಾ, ಮಂಗಳಾ, ಫಕೀರಪ್ಪ, ಲಕ್ಷ್ಮವ್ವ, ದೇವೆಂದ್ರಪ್ಪ, ವಿಜಯ ಸೇರಿದಂತೆ ಕೂಲಿಕಾರರು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.