
ಸಣ್ಣರಂಗಪ್ಪ ಚಿತ್ರಗಾರ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,01- ಜಿಲ್ಲೆಯ ಹೆಸರಾಂತ ಕರಕುಶಲ ಕಿನ್ನಾಳದ ಕಲೆಯಲ್ಲಿ ಎಂಟು ದಶಕಗಳಿಂದ ಕೆಲಸದಲ್ಲಿ ತೊಡಗಿದ್ದ ಸಣ್ಣರಂಗಪ್ಪ ಚಿತ್ರಗಾರ (92) ಭಾನುವಾರ ಕಿನ್ನಾಳದಲ್ಲಿ ನಿಧನರಾದರು.
ಅವರಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಕಿನ್ನಾಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮುಲಗಳು ತಿಳಿಸಿವೆ.
ಬದುಕಿನುದ್ದಕ್ಕೂ ಕಲೆಯನ್ನೇ ಜೀವ ಮತ್ತು ಅದರ ಸೊಬಗನ್ನೇ ಜೀವಾಳವಾಗಿರಿಸಿಕೊಂಡಿದ್ದ ಸಣ್ಣರಂಗಪ್ಪ 2022ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಊರೂರು ಅಲೆದಾಡಿ ಕಿನ್ನಾಳ ಕಲೆಯಲ್ಲಿ ಗ್ರಾಮದೇವತೆಗಳ ಮೂರ್ತಿಗಳು, ಛತ್ರಿ, ಚಾಮರ, ದಶಮಿದಿಂಡು, ಬಾರಕೋಲಗುಣಿ ಮತ್ತು ಮಕ್ಕಳ ಆಟಿಕೆ ಬೊಂಬೆಗಳನ್ನು ತಯಾರಿಸುತ್ತಿದ್ದರು. ಕಿನ್ನಾಳ ಕಲೆಯನ್ನು ನಿಯಮಿತವಾಗಿ ತಯಾರಿಸಿಕೊಂಡು ಬಂದ ಹಿರಿಯರಲ್ಲಿ ಇವರು ಪ್ರಮುಖರಾಗಿದ್ದರು.