
ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ವರದಿಗೆ ಎಚ್ಚೆತ್ತ ನಗರ ಸಭೆ
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ನಗರದಲ್ಲಿ ನಿರಂತರವಾಗಿ ಬೀದಿ ನಾಯಿಗಳು ಸಾರ್ವಜನಿಕರ ಹಾಗು ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ಪತ್ರಿಕೆಯಲ್ಲಿ ಅ. 2 ರಂದು ವರದಿ ಮಾಡಲಾಗಿತ್ತು.
ವರದಿಗೆ ಎಚ್ಚೆತ್ತ ನಗರಸಭೆಯ ಅಧಿಕಾರಿಗಳು ನಗರಸಭೆಯ ಸಭಾಂಗಣದಲ್ಲಿ ಮಾಂಸ ಮಾರಾಟಗಾರರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಹೊಸಪೇಟೆ ನಗರದಲ್ಲಿ ಸಾರ್ವಜನಿಕರು ಹಾಗೂ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗಿರುವುದರಿಂದ ನಗರದಲ್ಲಿ ಮಾಂಸ ಮಾರಾಟಗಾರರು ಮಾಂಸವನ್ನು ಬೀದಿ ನಾಯಿಗಳಿಗೆ ಅಥವಾ ರಸ್ತೆಯಲ್ಲಿ ಬಿಸಾಡದೇ, ತ್ಯಾಜ್ಯ ಸಂಗ್ರಹಣೆಯ ಡಸ್ಟ್ ಬಿನ್ ಗಳಲ್ಲಿ ಶೇಖರಣೆ ಮಾಡಬೇಕು. ಹಾಗೂ ಮಾಂಸವನ್ನು ಕಡ್ಡಾಯವಾಗಿ ಗಾಜಿನಿಂದ ಮಾಡಿದ ಪೆಟ್ಟಿಗೆಯಲ್ಲಿ ಇಟ್ಟು ಬೀದಿ ನಾಯಿಗಳಿಗೆ ಕಾಣದೇ, ಹಾಗೆ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ಖಡಕ್ಕಾಗಿ ಸೂಚಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ರೂಪೇಶಕುಮಾರ್, ಉಪಾಧ್ಯಕ್ಷ ರಮೇಶ ಗುಪ್ತಾ, ಕೆ.ಎಂ.ಸAತೋಷ, ಖಲಂದರ್, ನಗರಸಭೆ ಪರಿಸರ ಇಂಜಿನಿಯರ್ ಆರತಿ, ವಿರುಪಾಕ್ಷಪ್ಪ, ನೀಲಕಂಠ ಸೇರಿದಂತೆ ಸಿಬ್ಬಂದಿಗಳು ಇದ್ದರು.