
ಸಿರುಗುಪ್ಪ : ಅಂಚೆ ಕಚೇರಿಯಿಂದ ಸ್ವಚ್ಛತೆಯ ಸೇವೆ ಆಂದೋಲನಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 19- ನಗರದ ಭಾರತೀಯ ಅಂಚೆ ಇಲಾಖೆ ಬಳ್ಳಾರಿ ವಿಭಾಗ ಸಿರುಗುಪ್ಪ ಅಂಚೆ ಕಚೇರಿಯಿಂದ ಸ್ವಚ್ಛತ ತಾಹಿ ಸೇವೆ ೨೦೨೪ ವಭವ್ ಸ್ವಚ್ಛತಾ ಸಂಸ್ಕಾರ ಸೆಪ್ಟಂಬರ್ ೧೭ ರಿಂದ ಅಕ್ಟೋಬರ್ ೨ ರವರಿಗೆ ನಗರದ ಮಹಾತ್ಮ ಗಾಂಧಿ ಸರ್ಕಲ್‌ನಿಂದ ಪೋಸ್ಟ್ ಮಾಸ್ಟರ್ ಮಂಜುನಾಥ ಶೆಟ್ಟಿ ಭಾರತ ಸರ್ಕಾರ ಕಮ್ಯುನಿಕೇಷನ್ ಮತ್ತು ಇಂನ್ ಫಾರ್ಮೇಷನ್ ಟೆಕ್ನಾಲಜಿ ಸಚಿವಾಲಯದ ಎಂಡಿಜಿ ಎಸ್‌ಜಿಪಿ ಪೋಸ್ಟ್ ಪೂರಂ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ ಪೋಸ್ಟ್ ಆಫೀಸ್ ಸಿಬ್ಬಂದಿ ವರ್ಗದವರಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛತೆಯೇ ಸೇವೆ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಿ ನೈರ್ಮಲ್ಯ ಅಭ್ಯಾಸಗಳನ್ನು ರೂಡಿಸಿಕೊಳ್ಳುವಂತೆ ಜನರಲ್ಲಿ ಪ್ರೇರೇಪಣೆ ಗೊಳಿಸಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಹಮ್ಮಿಕೊಳ್ಳುವುದು ವಿವಿಧ ಸ್ಥಳಗಳನ್ನು ಸ್ವಚ್ಛಗೊಳಿಸಿ ಕಸ ಹೊಂದಿರುವ ಸ್ಥಳದಿಂದ ಸ್ವಚ್ಛತೆ ಇರುವ ಹಾಗೆ ರೂಪಾಂತರಗೊಳಿಸಿ ಜನರಲ್ಲಿ ಸ್ವಚ್ಛತೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳುವಂತೆ ಪ್ರೇರೇಪಿಸುವ ಜಾಗೃತಿ ಆಂದೋಲನವಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧನೆ ಸ್ವಚ್ಛತೆಯ ಜಾಥ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿದಾರರು ಮತ್ತು ಅವರ ಜವಾಬ್ದಾರಿ ಎಂಬ ಅರಿವು ಮೂಡಬೇಕೆಂದರು.