
ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಆಗ್ರಹಿಸಿ : ಸಿಎಂ ಮನೆ ಚಲೋ ಹೋರಾಟ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಆಗಸ್ಟ್ 5 ರಂದು ಕಟ್ಟಡ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ಮುಖ್ಯಮಂತ್ರಿ ಮನೆ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಗಡ್ಡಿ ಗ್ರಾಮದಲ್ಲಿ ಮುಖ್ಯ ಮಂತ್ರಿ ಚಲೋ ಹೋರಾಟದ ಬಿತ್ತಿ ಪತ್ರ ಅಂಟಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕರಾದ ಶರಣು ಗಡ್ಡಿ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಘೋಷಣೆ ಮಾಡಿದ ಸೌಲಭ್ಯಗಳನ್ನು ಕೂಡಲೇ ಜಾರಿಗೊಳಿಸಬೇಕು. ಕಲ್ಯಾಣ ಮಂಡಳಿಯ ಸೆಸ್ ಹಣ ದುರ್ಬಳಿಕೆ, ತನಿಖೆಯಾಗಬೇಕು. ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು. ಕಾರ್ಮಿಕ ಇಲಾಖೆ ಇಲ್ಲಿವರೆಗೆ ಖರೀದಿ ಮಾಡಿದ ವಿವಿಧ ಕಿಟ್ಟುಗಳು , ಲ್ಯಾಪ್ಟಾಪ್, ಟ್ಯಾಬು, ಇನ್ನಿತರ ಟೆಂಡರ್ಗಳಲ್ಲಿ ಆಗಿರುವ ಅಕ್ರಮ ತನಿಖೆ ಯಾಗಬೇಕು. ಕಾರ್ಮಿಕರಿಗೆ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕು.
ಹೊಸ ಕಾರ್ಡ್ ಮತ್ತು ರಿನೀವಲ್ ಮಾಡಿಸಲು ಆಗುತ್ತಿರುವ ತಾಂತ್ರಿಕ ತೊಂದರೆ ಕೂಡಲೇ ಸರಳಿಕರಣಗೊಳಿಸಬೇಕು ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಬೇಡಿಕೆಗಳು ಈಡೇರಬೇಕೆಂದರೆ ಎಲ್ಲಾ ಕಟ್ಟಡ ಕಾರ್ಮಿಕ ಬಂಧುಗಳು ಈ ಹೋರಾಟದಲ್ಲಿ ಭಾಗವಹಿಸಿ ಕಾರ್ಮಿಕ ಮಂಡಳಿ ಉಳಿವಿಗಾಗಿ ಒಗ್ಗಟ್ಟಾಗಿ ಮುಂದೆ ಬರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಮುಖಂಡರಾದ ಸುರೇಶ ಉಪ್ಪಾರ್, ಹನುಮಂತ, ಶರಣಪ್ಪ, ಭೀಮಣ್ಣ, ಕೃಷ್ಣ,ಯಮನಪ್ಪ ಅಗಿಸಿ, ಪರಸಪ್ಪ ವಡ್ಡರ,ಕನಕಪ್ಪ ಇನ್ನಿತರರು ಭಾಗವಹಿಸಿದ್ದರು.