ಸರ್ವರ ಸಹಕಾರದಿಂದ ಸಹಕಾರ ಸಂಘಗಳು ಯಶಸ್ಸು : ಬದರಿನಾಥ ಜೋಶಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 7- ಪಂಪಾ ನಗರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ನೂತನ ವಾಣಿಜ್ಯ ಸಂಕಿರಣಗಳ ಉದ್ಘಾಟನೆಯನ್ನು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹೆಚ್.ಆರ್.ಶ್ರೀನಾಥ ಉದ್ಘಾಟಸಿದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಂಪಾ ನಗರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಬದರಿನಾಥ ಜೋಶಿ ಮಾತನಾಡಿ, ನಗರದ ಬಸವೇಶ್ವರ ಸಹಕಾರಿ (ಬ್ಯಾಂಕ) ನಿಯಮಿತದಿಂದ ೩೫ಲಕ್ಷ ಸಾಲವನ್ನು ಪಡೆದು ನೂತನ ಆರು ಮಳಿಗೆಗಳನ್ನು ಎಲ್ಲರ ಸಹಕಾರ ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಿಂದ ಮಾಡಿದ್ದವೆ. ಸಹಕಾರ ಸಂಘಗಳು ಬೆಳೆಯಬೇಕಾದರೆ ಷೇರು ಹೋಲ್ಡದಾರರು ಸರ್ವರ ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಾ.ಗುರುರಾಜ ಅಯೋಧ್ಯಾ, ವಾಣಿಜ್ಯೋದ್ಯಮಿ ಕೆ.ಕಾಳಪ್ಪ, ಸಂಘದ ಮಾಜಿ ಅಧ್ಯಕ್ಷ ನಾರಾಯಣಪ್ಪ ನಾಯಕ ಜೋಗದ, ಶಂಕರ ಮಠದ, ಅಧ್ಯಕ್ಷ ನಾರಾಯಣರಾವ್ ವೈದ್ಯ, ಶಂಕರಗೌಡ ಹೊಸಳ್ಳಿ, ಸುದರ್ಶನ ಜೋಶಿ, ಅನಿಲ ಅಯೋಧ್ಯಾ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ದರೋಜಿ ರಂಗಣ್ಣ ಶೆಟ್ಟಿ, ನಗರಸಭೆ ಸದಸ್ಯ ವಾಸುದೇವ ನವಲಿ, ಚಂದ್ರ ಶೇಖರ ಅಕ್ಕಿ, ಶ್ಯಾಮಚಾರ್ಯ ಜೋಶಿ, ಪ್ರಲ್ಹಾದ ಹೇರೂರ, ರಘುಪವಾರ, ಉಪಾಧ್ಯಕ್ಷ ಗಿರಿಧರ ಬೆಟಗೇರಿ, ನಿರ್ದೇಶಕ ಮಹಾಲಿಂಗಪ್ಪ ಬನ್ನಿಕೊಪ್ಪ, ಮಾರುತಿ ಪ್ರಸಾದ್, ಕೋಪ್ರೇಶ ಜೋಶಿ, ಗುರು ಶಾಂತಪ್ಪ ಪಟ್ಟಣಶೆಟ್ಟಿ, ಎ.ಕೆ.ಕವಿತಾ, ಅನಿಲ್ ದೇಸಾಯಿ, ಮಹಾಬಲೇಶ್ವರ ಅಂಗಡಿ, ಶ್ರೀದೇವಿ, ಶ್ರೀಪಾದ್ ಭಟ್ ಹಾಗೂ ಕಾರ್ಯದರ್ಶಿ ವಾಜೇಂದ್ರ ದೇಶಪಾಂಡೆ ಉಪಸ್ಥಿತರಿದ್ದರು.