
ಕೃಷಿ ಇಲಾಖೆಯ ಆಯುಕ್ತರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 12- ಕೃಷಿ ಇಲಾಖೆಯ ಆಯುಕ್ತರಾದ ವೈ ಎಸ್ ಪಾಟೀಲ್ ರವರು ವಿಜಯನಗರ ಜಿಲ್ಲೆಯ ತಾಲೂಕಿನ ಹೊಸಪೇಟೆ ಹಾಗೂ ಕೂಡ್ಲಿಗಿ ತಾಲೂಕುಗಳಿಗೆ ಕ್ಷೇತ್ರ ಬೇಟಿ ನೀಡಿ ಮಾಹಿತಿ ಪಡೆದರು.
ಜಿಲ್ಲೆಯ ಸೆಂಟರ್ ಆಫ್ ಎಕ್ಸಲೆನ್ಸ್ ಹಾಗೂ ಜಿಲ್ಲಾ ಕೃಷಿ ಭವನಗಳ ಕಟ್ಟಡವನ್ನು ವೀಕ್ಷಿಸಿದರು, ತರುವಾಯ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ರೈತ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ದೊರಕುವ ಸೌಲಭ್ಯಗಳ ಹಾಗೂ ಅದನ್ನು ವಿತರಣೆ ಮಾಡುವ ಕುರಿತು ಪರಿಶೀಲಿಸಿದರು.
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಡ್ರೋಣ ಮೂಲಕ ತೊಗರಿ ಬೆಳೆಯಲ್ಲಿ ಸಿಂಪರಣೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ತೊಗರಿ ಬೆಳೆಯಲ್ಲಿ ಬರುವ ಕೀಟ ಹಾಗೂ ರೋಗ ಬಾದೆಗಳ ಕುರಿತು E-SAP ತಂತ್ರಾಂಶವನ್ನು ಕ್ಷೇತ್ರದಲ್ಲಿ ಪರೀಕ್ಷಿಸಿದರು. ಕೂಡ್ಲಿಗಿ ತಾಲೂಕಿನ ಹುಲಿಕಟ್ಟೆ ಗ್ರಾಮದ ವಿಶ್ವೇಶ್ವರ ಸಜ್ಜನ್ ಇವರ ಮರ ಆಧಾರಿತ ಕೃಷಿ ಪದ್ಧತಿ ಹಾಗೂ ಪಿಎಂಎಫ್ ಎಂ ಈ ಯೋಜನೆ ಅಡಿ ಪಡೆದ ಸೌಲಭ್ಯಗಳ ಕುರಿತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತ ಹುಲಿಕೆರೆ ಸಜ್ಜನ್ ರವರ ಜೊತೆಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಶ್ರೀ ವೆಂಕಟರಾಮ್ ರೆಡ್ಡಿ ಪಾಟೀಲ್, ಅಪರ ಕೃಷಿ ನಿರ್ದೇಶಕರು, ಬೆಂಗಳೂರು ಇವರು ಸಹ ಭಾಗಿಯಾಗಿದ್ದರು. ವಿಜಯನಗರ ಜಿಲ್ಲೆಯ ಉಪ ಕೃಷಿ ನಿರ್ದೇಶಕ ನಯಿಮ್ ಪಾಷಾ, ಕೂಡ್ಲಿಗಿ ಸಹಾಯಕ ಕೃಷಿ ನಿರ್ದೇಶಕ ವಾಮದೇವ್ ಕೊಳ್ಳಿ ಹಾಗೂ ಇತರೆ ಸಿಬ್ಬಂದಿ ಜೊತೆಗಿದ್ದು ಇಡೀ ದಿನದ ಕಾರ್ಯಕ್ರಮ ಆಯೋಜಿಸಿದ್ದರು.