ಸ್ಪರ್ಧೆಗಳು ಮನುಷ್ಯನಲ್ಲಿ ಶ್ರದ್ದಾ ಮನೋಭಾವ ಹೆಚ್ಚಿಸುತ್ತವೆ : ಹೆಬ್ಬಾಳಶ್ರೀ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 24- ಕಲೆ, ಸಂಗೀತ, ಸಾಹಿತ್ಯ ಲಲಿತ ಕಲೆಗಳು ಮನುಷ್ಯನಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವುದಲ್ಲದೆ, ಸ್ಪರ್ಧೆಗಳು ಶ್ರದ್ಧಾ ಮನೋಭಾವ ಹೆಚ್ಚಿಸುತ್ತವೆ ಎಂದು ಹೆಬ್ಬಾಳ ಬ್ರಹ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರ ಕನ್ನಡ ಸಾಹಿತ್ಯ ಭವನದಲಿ ಗದಗವಾಣಿ ಕನ್ನಡದ ದಿನ ಪತ್ರಿಕೆ ಹಾಗು ವಿಐಪಿ ಮೆಲೋಡಿಸ್ ಗಂಗಾವತಿ ಸಹಯೋಗದಲ್ಲಿ ಆಯೋಜಿಸಿದ್ದ ಕರೋಕೆ ಸೆಮಿಫೈಲ್ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಕಲೆ ಬಗ್ಗೆ ಆಸಕ್ತಿ ಮೂಡಿಸುವುದು ಇಂದಿನ ಅಗತ್ಯತೆಯಾಗಿದ್ದು. ಭಾರತೀಯ ಪಾರಂಪಾರಿಕ ಕಲೆಗಳು ಅವಸಾನದ ಅಂಚಿನಲ್ಲಿವೆ, ಅವುಗಳ ಬಗೆಗೆ ವಿಶೇಷ ಗಮನಕೊಡಬೇಕಿದೆ, ಭಾರತೀಯ ಸಿನೆಮಾ ಕ್ಷೇತ್ರಕ್ಕೆ ಕನ್ನಡ ಸಿನೆಮಾ ಕ್ಷೇತ್ರದ ಕೊಡುಗೆ ಅಪಾರ ಮಕ್ಕಳಲ್ಲಿ ಏಕಾಗ್ರತೆ ಬರಲು ಸಂಗೀತ, ಸಾಹಿತ್ಯದ ಕಡೆಗೆ ಒಲವು ಬರುವಂತೆ ಪಾಲಕರು, ಶಿಕ್ಷಕರು ಗಮನ ಹರಿಸಬೇಕು. ಗದಗವಾಣಿಯ ಮೂಲಕ ಸಿನೆಮಾ ಹಾಡುಗಳನ್ನು ಕರೋಕೆ ಪದ್ದತಿಯಂತೆ ಉತ್ತರ ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಡಿಸೆನ್ ಮಾಡುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು ಗಂಗಾವತಿಯಲ್ಲಿ ಸೆಮಿಫೈನಲ್ ಸ್ಪರ್ಧೆಯಲ್ಲಿ ಅಂತಿಮ ಸ್ಪರ್ಧೆಗೆ ಆಯ್ಕೆ ಕಾರ್ಯ ನಡೆದಿದ್ದು ಯಶಸ್ವಿಯಾಗಲಿ ಎಂದರು.

ಕಾಡಾ ಮಾಜಿ ಅಧ್ಯಕ್ಷ ಬಿ.ಹೆಚ್.ಎಂ. ತಿಪ್ಪೇರುದ್ರಸ್ವಾಮಿ ಮಾತನಾಡಿ ಕಲಾವಿದರು ಗಂಧರ್ವ ವಂಶಸ್ಥರು, ಕಲೆ ಇದ್ದ ವ್ಯಕ್ತಿಗಳಲ್ಲಿ ಕ್ರೂರತ್ವ ಇರುವುದಿಲ್ಲ, ಸಜ್ಜನಿಕೆಯಡೆಗೆ ಮನುಷ್ಯನನ್ನು ಅದು ಕೊಂಡ್ಯೋಯ್ಯುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಚಲನಚಿತ್ರ ನಟ ನಾಗರಾಜ್ ಇಂಗಳಗಿ ಮಾತನಾಡಿ, ಖ್ಯಾತ ಗಾಯಕಿ ಮಂಜುಳ ಅವರ ಪತಿ ಗುರುರಾಜ್ ವಿದೇಶಗಳಲ್ಲಿ ಜನಪ್ರೀಯವಾಗಿದ್ದ ಕರೋಕೆಯನ್ನು ಕರ್ನಾಟಕಕ್ಕೆ ತಂದರು ಗಂಗಾವತಿಯಲ್ಲಿ ಪ್ರಥಮ ಪತ್ರಿಕಾಗೋಷ್ಟಿ ಮಾಡುವ ಮೂಲಕ ಕರೋಕೆ ಜನಪ್ರೀಯಗೊಳಿಸಿದರು ಎಂದರು.

ಡಿ ವೈಎಸ್ಪಿ ಸಿದ್ದನಗೌಡ ಪಾಟೀಲ್ ಮಾತನಾಡಿ, ಸ್ಪರ್ಧೆಗಳಲಿ ಪಾಲ್ಗೊಳ್ಳುವಿಕೆ ಮುಖ್ಯ, ಇದರಿಂದಾಗಿ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕಲಿಕೆ ವೃದ್ಧಿಯಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ಅರಳ್ಳಿಹಳ್ಳಿಮಠ, ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಸಂಪಾದಕ ಮಂಜುನಾಥ ರಾಠೋಡ್, ಪತ್ರಕರ್ತ ವೈ.ಬಿ.ಜೂಡಿ, ಪ್ರಧಾನ ಮುಖ್ಯಶಿಕ್ಷಕ ಶ್ರೀನಿವಾಸ ನಾಯ್ಡು, ವಿಐಪಿ ಮೆಲೋಡಿಸ್ ತಂಡದ ಪ್ರೋಪ್ರೇಟರ್ ಹಾಗೂ ಗಾಯಕ ಪಂಪಾಪತಿ ಇಂಗಳಗಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ ಕಲ್ಮಠ, ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕರೋಕೆ ಕಲಾವಿದ ಜಗನ್ನಾಥ, ಶಂಭಣ್ಣ ದೊಡ್ಮನಿ, ವಿಜಯಲಕ್ಷಿ÷್ಮ ಹಿರೇಮಠ, ಇಂದ್ರೇಶ ಕೊಳ್ಳಿ, ಡಾ.ನಾಗರಾಜ ಕಂಬ್ಳಿ, ಪತ್ರಕರ್ತ ಶರಣಯ್ಯ ಕರಡಿಮಠ, ಡಾ.ಶರಣಪ್ಪ ವಕೀಲರು, ಹೆಚ್.ಸುರೇಶ, ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕರೋಕೆ ಸ್ಪರ್ಧಾರ್ತಿಗಳಿದ್ದರು.

ನಿರ್ಣಯಕರಾಗಿ ಹಿರಿಯ ಸಂಗೀತ ಕಲಾವಿದರಾದ ಜಾಕೀರ ಹುಸೇನ, ಶರಣಪ್ಪ, ಪಲ್ಲವಿ, ಕಿರಣ್ ನಿಡಗುಂದಿ, ಕಿರಣ್ ಮಿಸ್ಕಿನ್ ಕಾರ್ಯನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!