5

ಲಿಪಿಕ ನೌಕರರ ಸಾಮಾನ್ಯ ಬುನಾದಿ ತರಬೇತಿ : ಸಮಾರೋಪ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 1- ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಿಂದ ಜುಲೈ ೮ ರಿಂದ ಆಗಸ್ಟ್ ೩೧ರವರೆಗೆ ನಡೆದ ಲಿಪಿಕ ನೌಕರರ ಸಾಮಾನ್ಯ ಬುನಾದಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಮರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಲಾಖೆಯಲ್ಲಿನ ವಿವಿಧ ಸೇವೆಗಳ ಬಗ್ಗೆ, ನೀತಿ ನಿಯಮಗಳ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿ ಅರ್ಥೈಸಿಕೊಂಡಲ್ಲಿ ಉತ್ತಮ ಆಡಳಿತಗಾರರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳ ಬಗ್ಗೆ ಮೊದಲನೆಯದಾಗಿ ಸರಿಯಾಗಿ ತಿಳಿದುಕೊಳ್ಳಬೇಕು.

ಸಮಯ ಪರಿಪಾಲನೆ ಮಾಡಬೇಕು. ಲೋಪವಾಗದ ಹಾಗೆ ಕಚೇರಿಯ ಕಾರ್ಯಗಳನ್ನು ನಡೆಸಬೇಕು. ಕಚೇರಿಯ ಕಾರ್ಯದ ಜೊತೆಜೊತೆಗೆ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು. ಕುಟುಂಬದವರಿಗು ಸಹ ಸಮಯ ಕೊಡಬೇಕು. ಕಾಲಕಾಲಕ್ಕೆ ಸರ್ಕಾರಗಳು ಹೊರಡಿಸುವ ನಿಯಮಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲನೆ ಮಾಡಬೇಕುಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ಮಾಡಿದರು. ತರಬೇತಿ ಏರ್ಪಾಡು ಮಾಡಿದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರ ಕಾರ್ಯವು ಪ್ರಶಂಸಾರ್ಹವಾಗಿದೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಪ್ರೀತಿ, ವಿಶ್ವಾಸ, ಮಾನವೀಯತೆ, ಸಂಬAಧಗಳಿಗೆ ಯಾರು ಬೆಲೆ ಕೊಡುತ್ತಾರೋ ಅವರು ಸದಾಕಾಲ ಸುಖಮಯ ಜೀವನ ಸಾಗಿಸುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದ ಸತ್ಯವಾಗಿದೆ. ಹೀಗಾಗಿ ನೌಕರರು ಕಚೇರಿಯಲ್ಲಿನ ಇನ್ನೀತರ ಸಿಬ್ಬಂದಿಯೊಂದಿಗೆ ನಗುನಗುತ್ತ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಬೇಕು. ಕಚೇರಿಯ ಕಾರ್ಯವನ್ನು ಉತ್ಸಾಹದಿಂದ ಮಾಡಬೇಕು. ಸದಾಕಾಲ ಹಸನ್ಮುಖಿಯಾಗಿದ್ದು ಕಾರ್ಯನಿರ್ವಹಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಲಕ್ಷ್ಮಿಕಾಂತ ಎನ್, ಬೋಧಕರಾದ ಎಂ ಶ್ರೀಧರ, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ತರಬೇತಿ ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!