ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶಾಸಕ ಬಿ.ಎಂ.ನಾಗರಾಜ ಹರ್ಷ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 24- ರಾಜ್ಯದ ಸಂಡೂರು ಶಿಗ್ಗಾಂವಿ ಚನ್ನಪಟ್ಟಣ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿಗೆ ಶಾಸಕ ಬಿ.ಎಂ.ನಾಗರಾಜ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎಂ.ನಾಗರಾಜ ಅವರು ಮಾತನಾಡಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಬಡವರಿಗಾಗಿ ಜಾರಿಗೆ ತಂದ ೫ ಗ್ಯಾರಂಟಿಗಳು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವಿಗೆ ಕಾರಣ ಎಂದು ಅವರು ನೂತನ ಶಾಸಕರಿಗೆ ದೊರೆತ ಗೌರವಕ್ಕೆ ಅವರ ಯಶಸ್ಸಿಗೆ ಶುಭ ಹಾರೈಸಿ ಅಭಿನಂದಿಸಿದರು.
ಕಾ0ಸ್ ಮುಖಂಡರಾದ ಕಾಯಿಪಲ್ಲೆ ನಾಗರಾಜ, ಬಿ.ಮುತ್ತ್ಯಾಲಯ್ಯ ಶೆಟ್ಟಿ, ಬಿ.ವೆಂಕಟೇಶ್, ನಗರಸಭೆ ಸದಸ್ಯ ಹೆಚ್.ಗಣೇಶ, ಟಿ.ನಜೀರ್, ಮಲ್ಲಿಕಾರ್ಜುನ, ಹನುಮಂತ, ಕಾಂಗ್ರೆಸ್ ಮುಖಂಡರು ಮುಲ್ಲಾ ಕಲೀಮ್, ಮುಲ್ಲಾ ದಾದಾ ಕಲಂದರ್, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.