
ಬಿಜೆಪಿ ಸದಸ್ಯತ್ವ ಅಭಿಯಾನವನ್ನೆ ಕಾಪಿ ಮಾಡಿದ ಕಾಂಗ್ರೆಸ್: ಶಾಸಕ ದೊಡ್ಡನಗೌಡ ಪಾಟೀಲ
ಕುಷ್ಟಗಿ: ನಮ್ಮ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯತಂತ್ರವನ್ನೆ ಕಾಂಗ್ರೆಸ್ ಪಕ್ಷ ಕಾಪಿ ಮಾಡಿ ತಮ್ಮ ಪಕ್ಷದ ಸದಸ್ಯತ್ವ ಅಭಿಯಾನ ಮಾಡಿತು ಎಂದು ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿಯ ಅಂಜನಾದ್ರಿ ಕಾರ್ಯಾಲಯದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ 2024 ಕಾರ್ಯಾಗಾರದಲ್ಲಿ ಅವರು ಮಾತನಾಡಿ ಇಡೀ ವಿಶ್ವದಲ್ಲೆ ಸದಸ್ಯತ್ವ ಅಭಿಯಾನದಲ್ಲೆ ನಮ್ಮ ಬಿಜೆಪಿ ಅತೀ ಹೆಚ್ಚು ಸದಸ್ಯತ್ವ ಮಾಡಿದೆ. ಜಿಲ್ಲೆಯಲ್ಲಿ ಸೆ. 2 ರಿಂದ ಪ್ರಾರಂಭವಾಗಿ ಸೆ.30ರ ವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದೆ. ನಮ್ಮ ಪಕ್ಷದ ಕಾರ್ಯತಂತ್ರವನ್ನೆ ಕಾಪಿ ಮಾಡಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಈ ಹಿಂದೆ ಪ್ರಯತ್ನ ಮಾಡಿದೆ. ಅಷ್ಟರಮಟ್ಟಿಗೆ ಬಿಜೆಪಿ ಕಾರ್ಯತಂತ್ರ ರೂಪಿಸುತ್ತದೆ. ಆದ್ದರಿಂದ ನಮ್ಮ ಪಕ್ಷದ ಕಾರ್ಯತಂತ್ರ ಯಾವತ್ತು ಮುನ್ನಡೆಯಲ್ಲಿದ್ದು ಈ ಹಿಂದೆ ಮಾಡಿದ ಸದಸ್ಯತ್ವದ ರಿನಿವಲ್ ಮಾಡಬೇಕು. ರಾಜ್ಯದಲ್ಲಿ ಐದು ಜನ ಸದಸ್ಯತ್ವ ಸಂಚಾಲಕರು ಇದ್ದು ನಾನು ಅದರಲ್ಲಿ ನಾನು ಒಬ್ಬ. ನನಗೆ ಕಲಬುರ್ಗಿ ವಿಭಾಗದ ಉಸ್ತುವಾರಿ ನೀಡಿದ್ದಾರೆ. ನಮ್ಮ ಭಾಗದಲ್ಲಿ ಕಾರ್ಯ ಚುರುಕಾಗಿ ಮಾಡಿ ತೋರಿಸಬೇಕಿದೆ. ಜನಸೇವೆ ಮಾಡಬೇಕೆನ್ನುವ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸದಸ್ಯತ್ವ ಮಾಡಬೇಕು. ನಮ್ಮ ರಾಜ್ಯಾಧ್ಯಾಕ್ಷ ಬಿ.ವೈ ವಿಜಯೇಂದ್ರ ಅವರು ಕನಿಷ್ಟ ಒಂದೂವರೆ ಕೋಟಿ ಸದಸ್ಯತ್ವ ಆಗಬೇಕು ಎಂದು ತಿಳಿಸಿದ್ದಾರೆ. ಅದರಂತೆ ನಾವು ಎಲ್ಲರೂ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನಂತರ ಮುಖಂಡ ಕೆ. ಮಹೇಶ ಮಾತನಾಡಿ ಪ್ರತಿ ಒಂದು ಬೂತ್ ಗೆ ಕನಿಷ್ಟ 300 ಸದಸ್ಯತ್ವ ಮಾಡಬೇಕು. ಅಂದರೆ 273 ಬೂತ್ ಪೈಕಿ ಕನಿಷ್ಟ ಎಪ್ಪತ್ತು ಸಾವಿರ ಸದಸ್ಯತ್ವ ಮಾಡಬೇಕು. ಶಕ್ತಿ ಕೇಂದ್ರಕ್ಕೊಂದು ಟೀಮ್, ಮಹಾಶಕ್ತಿ ಕೇಂದ್ರಕ್ಕೊಂದು ಟೀಮ್ ಆಗಬೇಕು. ಕಾರ್ಯಕರ್ತರು ಜತೆಗೂಡಿ ಮೆಂಬರಶಿಪ್ ಮಾಡಬೇಕು. ಇದು ನರೆಂದ್ರ ಮೋದಿ ಆ್ಯಪ್ ನಲ್ಲಿ ಮಾತ್ರ ವರ್ಕ ಆಗುತ್ತದೆ. ಸದಸ್ಯತ್ವ ಮಾಡುವ ಕುರಿತು ಕೈಪಿಡಿ ಇದ್ದು ಅದರ ಪ್ರಕಾರ ಸದಸ್ಯತ್ವ ಮಾಡಬೇಕು. ಪ್ರತಿ ದಿನವೂ ಎಲ್ಲಾ ಶಕ್ತಿ ಕೇಂದ್ರಕ್ಕೆ ಹೋಗಿ ಎಷ್ಟು ಸದಸ್ಯತ್ವ ಆದವು ಎಂಬ ಮಾಹಿತಿ ಪಡೆಯಬೇಕು. ಕಳೆದ ವರ್ಷ ಪಡೆದ ಸದಸ್ಯತ್ವಕ್ಕು ಕೂಡ ವ್ಯಾಲಿಡಿಟಿ ಇದ್ದು ಮತ್ತೆ ರಿನಿವಲ್ ಮಾಡಬೇಕು. ಹೀಗಾಗಿ 8800002024 ಕೆ ಮಿಸ್ ಕಾಲ್ ಕೊಟ್ಟರೆ ಲಿಂಕ್ ಬರುತ್ತೆ ಅದರಲ್ಲಿ ಎಲ್ಲಾ ಮಾಹಿತಿ ತುಂಬಿ ಓಟಿಪಿ ಹಾಕಿ ನಂತರ ಪೋಟೋ, ಲೊಕೇಶನ್ ಹಾಕಬಹುದು. ಈ ರೀತಿ ಮಾಹಿತಿ ಹಾಕಬೇಕು ಎಂದು ತಿಳಿಸಿದರು. ಕಳೆದ ಬಾರಿ ನಮ್ಮ ಜಿಲ್ಲೆಯಲ್ಲಿ ಕುಷ್ಟಗಿ ಈ ಅಭಿಯಾನದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಈ ವರ್ಷವೂ ನಮ್ಮ ತಾಲೂಕ ಪ್ರಥಮ ಬರುವ ಹಾಗೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲುಕಾಧ್ಯಕ್ಷ ಮಹಾಂತೇಶ ಬದಾಮಿ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಹಳ್ಳೂರ, ತಾಲುಕ ಸಂಚಾಲಕ ಶಿವನಗೌಡ ಪಾಟೀಲ, ತುಕಾರಾಂ ಸೂರ್ವೆ, ಈರಣ್ಣ ಸೊಬರದ, ಚಂದ್ರು ವಡಿಗೇರಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.