WhatsApp Image 2024-08-05 at 4.53.41 PM

ಸಿಎಂ ಮೇಲೆ ಸುಳ್ಳು ಆರೋಪ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 5- ಮೂಡ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾ ಅವರ ತೇಜೋ ವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಸಿದ್ದರಾಮಯ್ಯನವರು ಯಾವಾಗಲೂ ಶುದ್ಧ ಹಸ್ತರು ಎನ್ನುವುದು ಲೋಕಕ್ಕೆ ತಿಳಿದಿದೆ. ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು ಅವರ ವಿರುದ್ಧ ಪಿತೂರಿ ನಡೆಸುತ್ತಿದೆ ಇದು ಒಬ್ಬ ಹಿಂದುಳಿದ ನಾಯಕನ ಮೇಲೆ ನಡೆಸುವ ಪಿತೂರಿಯಾಗಿದೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಬಳ್ಳಾರಿ ಜಿಲ್ಲಾ ಅಹಿಂದ ವರ್ಗದ ನಾಯಕರು ಗೌರವಾನ್ವಿತ ರಾಷ್ಟ್ರಪತಿಗಳಿಗೆ ದೂರು ಮನವಿಯನ್ನು ನೀಡಿದ್ದಾರೆ.

ಸಿದ್ದರಾಮಯ್ಯನವರ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆಯಂತೆ ಮಾಡಿಕೊಂಡು ಅವರನ್ನು ಹೇಗಾದರೂ ಮಾಡಿ ರಾಜಕೀಯವಾಗಿ ಪದಚ್ಯಿತಿಗೊಳಿಸಲು ಕುತಂತ್ರದ ಸಂಚು ರೂಪಿಸುತ್ತದೆ ಇದನ್ನು ಅಹಿಂದ ವರ್ಗ ಬಲವಾಗಿ ವಿರೋಧಿಸುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಅಹಿಂದ ವರ್ಗದ ನಾಯಕರದ ಎ ಮಾನಯ್ಯ ವಿ ಎಸ್ ಶಂಕರ್ ಹುಮಾಯುನ್ ಖಾನ್ ಸೇರಿದಂತೆ ಇತರರು ದೇಶದ ಘನವೆತ್ತ ರಾಷ್ಟ್ರಪತಿಗಳಿಗೆ ಬಳ್ಳಾರಿ ಜಿಲ್ಲಾ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ತಿಳಿಸಿದ್ದಾರೆ.

ದೇಶದ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಉತ್ತರಗಳನ್ನು ನೀಡುತ್ತಿರುವ ಸಿದ್ದರಾಮಯ್ಯನವರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಕಾರಣ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಹುನ್ನಾರ ರೂಪಿಸಿದ್ದಾರೆ.

ಈ ಹಿಂದೆ ಸಹ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ಇಡಿ ಕೇಂದ್ರ ಕಲಿಕಾ ಸಂಸ್ಥೆಯ ಅಧಿಕಾರಿಗಳು ಆರೋಪಿಗಳಿಂದ ಸಿದ್ದರಾಮಯ್ಯನವರ ಹೆಸರನ್ನು ಹೇಳಿಸಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುವ ಯೋಜನೆ ರೂಪಿಸಿತ್ತು ಆದರೆ ಅದು ಫಲಕಾರಿಯಾಗದೆ ಇದ್ದಾಗ ಈ ರೀತಿಯಾಗಿ ಮೂಡ ಹಗರಣವನ್ನು ಸಿದ್ದರಾಮಯ್ಯನವರ ಕೊರಳಿಗೆ ಹಾಕಲು ಹೊಂಚು ಹಾಕುತ್ತಿದ್ದಾರೆ ಇದರಲ್ಲಿ ಅವರು ಸಫಲರಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ತನಿಖಾ ಸಂಸ್ಥೆ ಇಡಿ ಮತ್ತು ಕೇಂದ್ರದ ಕೈ ಗೊಂಬೆ ರಾಜ್ಯಪಾಲರ ವಿರುದ್ಧ ಕಿಡಿ ಕಿಡಿಕಾರಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ರಾಜಕೀಯ ವಿರೋಧಿಗಳನ್ನು ತನಿಕ ಸಂಸ್ಥೆಗಳಾದ ಈಡಿ ಐಡಿ ಮತ್ತು ಸಿ.ಬಿ.ಐ ಸೇರಿದಂತೆ ವಿವಿಧ ತನಿಕಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಸಿದ್ದರಾಮಯ್ಯನವರನ್ನು ಸಹ ರಾಜಕೀಯದಿಂದ ದೂರ ಮಾಡಿ ವೈಯಕ್ತಿಕ ವರ್ಚಸ್ಸಿಗೆ ಮಸಿ ಬೆಳೆಯುವ ಸಲುವಾಗಿ ಕುತಂತ್ರವನ್ನು ರೂಪಿಸಿ ಪುಲ್ಲಕ ಕಾರಣವಾದ ಮೂಡ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ. ಅಸಲಿಗೆ ಮೂಡ ವಿವಾದವು ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವಾಗ ನಡೆದ ಘಟನೆಯಾಗಿದೆ, ಅಂದಿನ ಮುಖ್ಯಮಂತ್ರಿಗಳನ್ನು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆ ಮಾಡುವುದು ಬಿಟ್ಟು ದ್ವೇಷದ ರಾಜಕಾರಣದಿಂದ ಸಿದ್ದರಾಮಯ್ಯನವರ ಹೆಸರಿಗೆ ತಲುಪು ಹಾಕಿದ್ದಾರೆ ಇದರಲ್ಲಿ ವಿಜಯೇಂದ್ರನಾಗಲಿ ಜೆಡಿಎಸ್ ನ ನಾಯಕ ಕುಮಾರಸ್ವಾಮಿಯಾಗಲಿ ಅಥವಾ ಅಶೋಕ ಆಗಲಿ ಯಶಸ್ವಿಯಾಗಲು ಸಾಧ್ಯವಿಲ್ಲ, ಇಂಥ ವಿಷಯಗಳಿಂದ ಸಿದ್ದರಾಮಯ್ಯನವರನ್ನು ತಿಕ್ಕುತ್ತೇವೆ ಎಂಬ ಸಂಚು ಕೇವಲ ಭ್ರಮೆಯಾಗಿ ಉಳಿಯಲಿದೆ ಹೊರತು ಅವರನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಜೆಡಿಎಸ್ ನಾಯಕರಿಗೆ ತಿಳಿಸಲು ಇಚ್ಛಿಸುತ್ತೇವೆ ಎಂದರು.

ನೂರಾರು ಸಂಖ್ಯೆಯಲ್ಲಿ ಸೇರಿದ ವರ್ಗದ ಜನರು ಮತ್ತು ಸಿದ್ದರಾಮಯ್ಯನವರ ಅಭಿಮಾನಿಗಳು ಗಾಂಧಿ ಭವನದಲ್ಲಿ ಸಭೆ ಸೇರಿ ಕಡಿಗಿ ಚೆನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಸದರಾದ ಈ ತುಕಾರಾಂ, ನಗರ ಶಾಸಕ ಭರತ್ ರೆಡ್ಡಿ ಕಂಪ್ಲಿ ಶಾಸಕ ಜೆಎನ್ ಗಣೇಶ್ ಮತ್ತು ನಗರ ಪಾಲಿಕೆ ಮೇಯರ್ ಉಪಮೇಯರ್ ಮಾಜಿ ಮೇಯರ್, ಎಲ್ಲಾ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು , ಪಾಲಿಕೆಯ ಎಲ್ಲಾ ಸದಸ್ಯರುಗಳು, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಹಿಂದ ಶೋಷಿತ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ಎ ಮಾನಯ್ಯ , ಮುಂಡರಗಿ ನಾಗರಾಜ್,
ಹೂಮಾಯೂನ್ ಖಾನ್ , ಚಿದಾನಂದಪ್ಪ ಕಾರ್ಯಾಧ್ಯಕ್ಷ ಬಿಎಸ್ ಶಿವಶಂಕರ್, ಅಧ್ಯಕ್ಷರಾದ ಗಾದಿಲಿಂಗನಗೌಡ ಪ್ರಧಾನ ಕಾರ್ಯದರ್ಶಿ ಇಮಾಮ್ ಗೋಡೆಕರ್ ಸಂಘಟನಾ ಕಾರ್ಯದರ್ಶಿ ಸಂಗನಕಲ್ಲು ವಿಜಯ್ ಕುಮಾರ್ ಸೇರಿದಂತೆ ನೂರಾರು ಜನ ಅಹಿಂದ ಮುಖಂಡರು ಮತ್ತು ಸಂಗೊಳ್ಳಿ ರಾಯಣ್ಣ ಸಂಘಟನೆಯ ಜಿಲ್ಲಾಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!