
ದಲಿತ ಸಮುದಾಯದ ರಾಜ್ಯಪಾಲರ ಅವಹೇಳನ ಮಾಡಿದ ಕಾಂಗ್ರೆಸ್ : ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ ಅಸಮಾಧಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಮೂಡ ಹಗರಣದ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿದ ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷ ಅವಹೇಳನ ಮಾಡಿರುತ್ತದೆ ಇದು ದಲಿತಪರ ಅಹಿಂದ ಪರವಾದ ಸರ್ಕಾರ ಎಂದು ಬೊಬ್ಬೆ ಇಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರತೀಯ ಜನತಾ ಪಕ್ಷದ ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಈ ವಿಷಯದ ಕುರಿತು ಇಂದು ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ನೇತೃತ್ವ ವಹಿಸಿದ್ದ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ದಲಿತಪರ ಹಿಂದುಳಿದ ವರ್ಗಗಳ ಪರ ಎಂದು ಮೊಸಳೆ ಕಣ್ಣೀರಿಡುತ್ತಾ ಅವರ ಮತಗಳನ್ನು ಪಡೆಯುತ್ತಿದೆ ಆದರೆ ಪರಿಶಿಷ್ಟ ಜಾತಿ ಮತ್ತು ಜನಾಂಗಗಳನ್ನು, ಪಂಗಡಗಳನ್ನು ಅಭಿವೃದ್ಧಿಯಲ್ಲಿ ಕಡೆಗಣಿಸುತ್ತಿದೆ ಮತ್ತು ಅವರ ಅಭಿವೃದ್ಧಿಗಾಗಿ ನಿಗದಿಪಡಿಸಿದ್ದ ಹಣವನ್ನು ಸಹ ಬೇರೆ ಉದ್ದೇಶಕ್ಕೆ ಬಳಸಿಕೊಂಡು ಅವರಿಗೆ ಅನ್ಯಾಯ ಮಾಡಿರುತ್ತದೆ, ಅಷ್ಟೇ ಅಲ್ಲದೆ ಒಬ್ಬ ದಲಿತಪರ ರಾಜ್ಯಪಾಲರಾದ ತಾವರ್ ಚೆಂದ್ ದೆಹೊಲೆಟ್ ಅವರನ್ನು ಹೀಯಾಳಿಸಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಇದು ಖಂಡನೀಯ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.
ರಾಜ್ಯಪಾಲರಾದ ಥಾವರ್ಚಂದ್ ಅವರು ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ ಎನ್ನುವುದನ್ನು ದೊಡ್ಡ ಅಪರಾಧವೆಂಬಂತೆ ಕಾಂಗ್ರೆಸ್ ನಾಯಕರು ಬಿಂಬಿಸಿ ರಾಜ್ಯಪಾಲರನ್ನು ಅವಹೇಳನ ಮಾಡಿದ್ದಾರೆ ಇದು ಪಕ್ಷಕ್ಕೆ ಶೋಭೆ ತರುವಂತದ್ದಲ್ಲ ಎಂದು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಬಿಜೆಪಿ ರೈತ ಮೋರ್ಚಾದ ಗಣಪಾಲ ಐನಾಥರೆಡ್ಡಿ, ಡಾಕ್ಟರ್ ಮೈಪಾಲ್, ಎಂ ಎಸ್ ಸಿದ್ದಪ್ಪ, ರಾಘವೇಂದ್ರ ಚೆಲುವದಿ, ಓಬಳೇಶ್, ಎಂ ವೀರೇಶ್, ಸೋಮನಗೌಡ, ಊಳೂರು ಸಿದ್ದೇಶ್, ಮಲ್ಲೇಶ್ ಸೇರಿದಂತೆ ಮಹಿಳಾ ಘಟಕದ ಬಹಳಷ್ಟು ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.