ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಲಿದೆ : ಎನ್.ಗಂಗೆರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30 ರಾಜ್ಯದ್ಯಂತ ನಡೆಯುತ್ತಿರುವ ಉಪಚುನಾವಣೆ ಸಮರದಲ್ಲಿ, ಸಂಡೂರು ಕ್ಷೇತ್ರ ಕಾಂಗ್ರೆಸ್ ಅತಿಹೆಚ್ಚಿನ ಮೆಜಾರಿಟಿಯಿಂದ ಜಯಭೇರಿ ಸಾಧಿಸಲಿದೆ ಎಂದು, ನಗರಸಭಾ ಮಾಜಿ ಸದಸ್ಯ, ಜನಗಣಮನ ಒಕ್ಕೂಟದ ರಾಷ್ಟ್ರ ಅಧ್ಯಕ್ಷ, ಎನ್.ಗಂಗೆರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮದ ಜೊತೆ ಅವರು ಮಾತನಾಡುತ್ತಾ, ಬಿಜೆಪಿ ಮಾಡಿದ ಸ್ವಯಂಕೃತ ಅಪರಾಧದಿಂದ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳು ಅತಿ ಹೆಚ್ಚು ಇವೆ ಎಂದು ಹೇಳಿದರು.
ಅಖಂಡ ಬಳ್ಳಾರಿಯ ವಿಭಜನೆ, ಅಕ್ರಮ ಮೈನಿಂಗ್, ಇತರ ಕಾರಣಗಳನ್ನು ಸಂಡೂರು ಭಾಗದ ಜನ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಗುಣ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಪಂಚ ಗ್ಯಾರೆಂಟಿ ಯೋಜನೆಗಳು, ಇತರ ಅಭಿವೃದ್ಧಿಯನ್ನು ರಾಜ್ಯದ ಜನತೆಯ ಗಮನಿಸುತ್ತಿದ್ದು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಕೈ ಬಿಡುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.