
ಸಹಕಾರಿ ಸಂಘಗಳಿಗೆ ಎಲ್ಲಾ ರೈತರ ಸಹಕಾರ ಮುಖ್ಯ : ಹಾಲಪ್ಪ ಆಚಾರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 24- ಸಹಕಾರಿ ಸಂಘಗಳಿಗೆ ಎಲ್ಲಾ ರೈತರ ಸಹಕಾರ ಬಹಳ ಮುಖ್ಯ ಮತ್ತು ರೈತರ ಜೀವನಾಡಿಯಾಗಿರುವ ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ ಅದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದಾಗ ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ನಿಯಮಿತ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ೬೫ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರಕಾರ ರೈತರ ಸಹಕಾರಿ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ ರೈತರು ಕಷ್ಟ ನಷ್ಟ ಅನುಭವಸಿದರು ರಾಜ್ಯ ಸರ್ಕಾರ ಹೆಸರು ಗೋವಿನ ಜೋಳ ಖರೀದಿ ಕೇಂದ್ರಗಳಿಗೆ ಸಹಕಾರ ಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ತಾಲೂಕಿನ ಚಿಕ್ಕೋಪ ತಾಂಡಾದಲ್ಲಿ ಸರಕಾರ ಕೋಟ್ಯಾಂತರ ವೆಚ್ಚ ಖರ್ಚು ಮಾಡಿ ಉಗ್ರಾಣ ನಿರ್ಮಾಣ ಮಾಡಿರುವುದು ಯಾವ ರೈತರಿಗೆ ಅನುಕೂಲವಾಗಿದೆ ಪಟ್ಟಣದಲ್ಲಿ ಉಗ್ರಾಣ ಕೋಣೆ ನಿರ್ಮಾಣ ಮಾಡಿದರೆ ಎಲ್ಲಾ ರೈತರಿಗೆ ಅನುಕೂಲವಾಗತ್ತಿತ್ತು ಇದನ್ನು ಬೇರಕಡೆ ಮಾಡಿ ಯಾವ ಉಪಯೋಗ ಬಾರದಾಗಿದೆ ಎಂದರು.
ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳು ರೈತರ ಸಹಕಾರದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳವಣಿಗೆ ಯಾಗಬೇಕಿದೆ . ವಿವಿಧ ಸಹಕಾರಿ ಸಂಘಗಳು ರೈತರ ಆರ್ಥಿಕ ಸ್ವಾವಲಂಬನೆ ಜೀವನಕ್ಕೆ ದಾರಿ ಯಾಗಿದೆ ಎಂದರು ಸಹಕಾರಿ ಸಂಘಗಳು ಹೆಚ್ಚು ಅಭಿವೈದಿಯಾಗಬೇಕಾದರೆ ಹಾಗೂ ಆಡಳಿತ ಮಂಡಳಿ ನಿಸ್ವಾರ್ಥ ಸೇವ ಮನೋಭಾವ ರೂಡಿಸಿಕೊಂಡಾಗ ಮಾತ್ರ ಸಹಕಾರಿ ಸಂಘಗಳು ಸಮಗ್ರ ಅಭಿವೃದ್ಧಿಗೊಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಟಿಎಪಿಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಸಹಕಾರಿ ಸಂಘಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಎಲ್ಲರ ಸಹಕಾರ ಬಹಳ ಮುಖ್ಯ ಮತ್ತು ಈ ಹಿಂದೆ ತಾಲೂಕಿನ ೩೨ ಸಹಕಾರಿ ಸಂಘಗಳು ನಷ್ಟವಾಗಿ ಮುಚಿಹೋಗುವ ಪರಿಸ್ಥಿತಿಯಲ್ಲಿ ಇದ್ದಾಗ ಆಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಹಾಲಪ್ಪ ಆಚಾರ ಅವರು ಈ ಭಾಗದ ಸಹಕಾರಿ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಹಕಾರಿ ಸಂಘಗಳನ್ನು ಪುನಃಶ್ಚೇತನಗೊಳಿಸಿದರು ಅವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ ನಾಗಲಾಪೂರಮಠ, ಉಪಾಧ್ಯಕ್ಷ ಗುರಪ್ಪ ಅಂಗಡಿ, ಸಂಘದ ವ್ಯವಸ್ಥಾಪಕ ದೇವಿಂದ್ರಪ್ಪ ಬಸಪ್ಪನವರು, ನಿರ್ದೇಶಕರಾದ ಶಂಭುಲಿAಗಪ್ಪ ಜೋಳದ, ಹನುಮಗೌಡ ಹಳ್ಳಿ, ಮಾರುತಿ ಹೊಸಮನಿ, ಶರಣಪ್ಪ ಈಳಗೇರ, ಶರಣಪ್ಪ ಸೂಂಪುರ, ರುದ್ರಪ್ಪ ನಡುವಿನಮನಿ, ಜಗದೀಶ್ ಪೂಜಾರ, ಮಾರುತಿ ಎಮ್ಮಿಗುಡದ, ವಿಜಯಲಕ್ಷ್ಮಿ ಹೊಂಬಳ, ಪಾರವ್ವ ಮಾದಿನೂರ, ಮುಖಂಡರುಗಳಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಶೇಖರಗೌಡ್ರ ಉಳ್ಳಾಗಡ್ಡಿ, ಬಾಳಪ್ಪ ಹಳ್ಳೇಹೊನಪ್ಪನವರು, ಷಣಮುಖಪ್ಪ ರಾಂಪುರ, ಶರಣಪ್ಪ ರಾಂಪುರ, ವೀರಣ್ಣ ಹುಬ್ಬಳ್ಳಿ, ಮಾಂಹತೇಶ ಗಾಣಗೇರ, ಪ.ಪಂ. ಸದ್ಯಸರಾದ ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ರೇವಣಪ್ಪ ಹಿರೇಕುರಬರ ಮತ್ತು ಸಂಘದ ಸಿಬ್ಬಂದಿಗಳು ಹಾಗೂ ಇತರರು ಭಾಗವಹಿಸಿದ್ದರು.