
- ಇನ್ಮುಂದೆ ದ್ವಿಚಕ್ರ ವಾಹನ ಸವಾರಿಗೆ ಹೆಲ್ಮೆಟ್ ಕಡ್ಡಾಯ: ಸಿಪಿಐ ಯಂಶವಂತ ಬಿಸನಳ್ಳಿ
ಸುಪ್ರೀಂ ಕೋರ್ಟ ಕಟ್ಟುನಿಟ್ಟಿನ ಆದೇಶದಂತೆ ಇನ್ಮುಂದೆ ದ್ವಿಚಕ್ರ ವಾಹನ ಸವಾರರು ಯಾವುದೆ ಆಕಸ್ಮಿಕ ಅಪಘಾತದಿಂದ ಬಚಾವಾಗಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನಚಲಾಯಿಸಬೇಕು ಎಂದು ಸಿಪಿಐ ಯಶವಂತ ಬಿಸನಳ್ಳಿ ಖಡಕ್ಕಾಗಿ ಹೇಳುತ್ತಿರುವುದು ಕಂಡು ಬಂದಿತು.
ಆಗಸ್ಟ ೧ ರಿಂದ ಹೆಲ್ಮೆಟ್ ಕಡ್ಡಾಯ ಜಾರಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೈಕ್ ಸವಾರರು ಹೆಲ್ಮೇಟ್ ಧರಿಸದೆ ಓಡಾಡುವ ದ್ವಿಚಕ್ರ ವಾಹನಗಳನ್ನು ತಡೆದು ಸವಾರರಿಗೆ ಹೆಲ್ಮೆಟ್ ಕಡ್ಡಾಯದ ಕುರಿತು ಮಾಹಿತಿ ತಿಳಿಸಿದರು.
ಹೆಲ್ಮೆಟ್ ಧರಿಸಿ ಎಂಬುದು ಸರಕಾರದ ಹೊಸ ನಿಯಮವಲ್ಲ. ಭಾರತದ ಕಾಯ್ದೆಯಲ್ಲಿ ಮೊದಲಿನಿಂದಲೂ ಇದೆ. ಆದರೆ, ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಹುತೇಕ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದು ಸವಾರರು ಮೃತಪಡುತ್ತಿದ್ದಾರೆ. ಬೈಕ್ ಅಪಘಾತ ಎಂದಾಗ ತಲೆಗೆ ಪೆಟ್ಟು ಬೀಳುವುದು ಜಾಸ್ತಿ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಹಾಕಿ ಗಾಡಿಓಡಿಸುವುದು ಒಳ್ಳೆಯದು. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹೆಲ್ಮೆಟ್ ಕಡ್ಡಾಯ ಚಾರಿಗೊಳಿಸಿರುವದರಿಂದ ವಿಶೇಷ ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮಟ್ ಕಡ್ಡಾಯ ಹೆಲ್ಮಟ್ ಹಾಕದೆ ಸಂಚಾರ ಮಾಡಿದವರಿಗೆ ೫೦೦ ರೂ ದಂಡ ವಿಧಿಸಲಾಗುವುದು. ರಸ್ತೆಯಲ್ಲಿ ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡ ಬೇಡಿ ಹಾಗೂ ನಿಮ್ಮ ಗಮನ ಬೇರೆ ಕಡೆ ಚಲಿಸಲು ಬಿಡಬೇಡಿ, ಇಲ್ಲವಾದರೆ ಅಪಘಾತಕ್ಕೆ ಕಾರಣವಾಗುವುದು ರಸ್ತೆ ಸುರಕ್ಷತೆ ಮತ್ತು ನಿಯಮ ಪಾಲನೆ ಮಾಡಿದರೆ ಅಪಘಾತ ಹಾಗೂ ಇನ್ನಿತರೆ ಹಾನಿ ತಡೆಗಟ್ಟಲು ಸಾಧ್ಯ ಎಂದರು.