ae5b3d20-7b4f-4d95-8e07-a78bae47b44e

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್
ಸಂಜೆ ಅಥವಾ ನಾಳೆಯಿಂದ ಗೇಟ್ ಕೆಲಸ ಆರಂಭ
: ಸಚಿವ ತಂಗಡಗಿ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ: ಆ.13- ತಂತ್ರಜ್ಞಾನ ಸಲಹೆ ಪಡೆದು ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಮುರಿದಿದ್ದು ಗೇಟ್ ಕಾಮಗಾರಿ ಮಂಗಳವಾರ ಸಂಜೆ ಅಥವಾ ನಾಳೆ ಬೆಳಗ್ಗೆ ಯಿಂದ ಆರಂಭಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರು ಮಂಗಳವಾರದಂದು ಮಾಧ್ಯಮದವರ ಜೋತೆ ಮಾತನಾಡಿದ ಅವರು ಡ್ಯಾಮ್ ನ ಕ್ರಸ್ಟ್ ಗೇಟ್ ಕುಡಿಸಲು ಇಗಾಗಲೆ ಗೇಟ್ ಸಿದ್ದವಾಗಿದ್ದು 64 *4 ಅಳೆತೆಯ ಐದು ಗೇಟ್ ಸಿದ್ದಪಡಿಸಲಾಗಿದೆ ಹಂತ ಹಂತವಾಗಿ ಕಾಮಾಗಿ ಮಾಡಲಾಗುವುದು ಎಂದರು.
ಗೇಟ್ ಮುರಿದಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಬಗ್ಗೆ ಮಾಡುತ್ತಿರುವ ಆರೋಪಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಣೆಕಟ್ಟೆಯ ನಿರ್ವಹಣೆಗೆ ಪ್ರತಿ ವರ್ಷ ಬೇಕಾದಷ್ಟು ಹಣವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ನಾವು ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ರಾಜಕೀಯವಾಗುತ್ತದೆ. ನನಗೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ರೈತರ ಹಿತ ಕಾಪಾಡುವುದು ಹಾಗೂ ಅಣೆಕಟ್ಟೆಯನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ ಎಂದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಬಸನಗೌಡ ಬಾದರ್ಲಿಇತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!