
ದನಕನದೊಡ್ಡಿ ಖೋಖೋ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- 2024-25ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕಿಯರ ಖೋಖೋ ಸ್ಪರ್ಧೆಯಲ್ಲಿ ಕೊಪ್ಪಳ ತಾಲೂಕಿನ ದನಕನದೊಡ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಭಿನಂದನೆ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ.ಎಸ್, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ತಗಡಿನಮನಿ, ಜಿಲ್ಲಾ ದೈಹಿಕ ಪರಿವೀಕ್ಷಕ ಬಸವರಾಜ್, ತಾಲೂಕು ದೈಹಿಕ ಪರಿವೀಕ್ಷಕ ವೀರಣ್ಣ ಗೌಡ್ರು, ಇಸಿಓ ವೈಶಂಪಾಯನ, ಸಿಆರ್‌ಪಿ ಸದಾನಂದ, ಎಸ್‌ಡಿಎಂಸಿ ಅಧ್ಯಕ್ಷ ಹುಸೇನಭಾಷಾ, ಗ್ರಾಮ ಪಂಚಾಯತಿ ಸದಸ್ಯ ರವಿಕುಮಾರ್ ವಂಟಿಗಾರ್, ಮಕ್ಕಳ ಕ್ರೀಡಾ ತರಬೇತಿದಾರ ಮಲ್ಲಪ್ಪ ವಂಟಿಗಾರ, ಯಮನೂರ ಆಗೋಲಿ, ಹನುಮೇಶ್ ಮೂಲಿಮನಿ, ಗ್ರಾಮದ ಯುವ ಮುಖಂಡ ಕೃಷ್ಣ ಪತ್ತಾರ್, ವಿರೂಪಾಕ್ಷ ಆಗೋಲಿ, ಫಕೀರಪ್ಪ ಕೋರಿ ಸೇರಿದಂತೆ ಊರಿನ ಗುರುಹಿರಿಯರು ಅಭಿನಂದಿಸಿದ್ದಾರೆ.