1

ಅಸುರಿ ಗುಣಗಳ ಸಂಹಾರ ದೈವೀ ಗುಣಗಳ ಧಾರಣೆಯೇ ದಸರಾ : ಯೋಗಿನಿ ಅಕ್ಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 11- ಮನುಷ್ಯನ ಒಳಗಿರುವ ಸಿಟ್ಟು ಈರ್ಷೆ, ದ್ವೇಷ, ಅಸೂಯೆ, ಹೊಟ್ಟೆ ಕಿಚ್ಚು, ಅಹಂಕಾರ ಮುಂತಾದ ಅಸುರಿ ಗುಣಗಳ ಸಂಹಾರ ಮತ್ತು ಶಾಂತತೆ, ಸಮಾಧಾನತೆ, ಹನ್ಮುಖತೆ,ಮಧುರತೆ, ಪವಿತ್ರತೆ, ಗಂಭೀರತೆ ಮುಂತಾದ ದೈವೀ ಗುಣಗಳ ಧಾರಣೆಯೇ ದಸರಾ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಎಂದು ಬ್ರಹ್ಮ ಕುಮಾರಿ ಯೋಗಿನಿ ಅಕ್ಕ ತಿಳಿಸಿದರು.

ಆರ್ಯವೈಶ್ಯ ಸಮಾಜದ ವತಿಯಿಂದ ವಾಸವಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಮನುಷ್ಯ ತನ್ನಲ್ಲಿರುವ ರಾಕ್ಷಸೀಯ ಪ್ರವೃತ್ತಿಯನ್ನು ಸಂಹಾರ ಮಾಡಿಕೊಳ್ಳಲು ಒಂದೆರಡು ದಿನಗಳು ಸಾಲದು ಆದ್ದರಿಂದ ನವ ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ ಸರ್ವಶಕ್ತಿವಂತ ಪರಮಾತ್ಮ ಶಿವನಿಂದ ಶಕ್ತಿ ಪಡೆದವರೇ ಈ ನವದುರ್ಗೆಯರು ಶಿವಶಕ್ತಿಯರು. ನಾವು ಸಹ ಪರಮಾತ್ಮ ಶಿವನಿಂದ ಶಕ್ತಿಯನ್ನು ತುಂಬಿಕೊAಡು ಅಸುರಿ ಗುಣಗಳ ಮೇಲೆ ವಿಜಯಿ ಆಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವುದೇ ನವರಾತ್ರಿ ಹಬ್ಬ ಆಚರಣೆಯ ಮುಖ್ಯ ಉದ್ದೇಶ ಎಂದರು.

ಮನುಷ್ಯ ಸಂಸಾರ, ಸಂಬAಧ, ಉದ್ಯೋಗ, ವ್ಯವಹಾರ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಸಹನ ಶಕ್ತಿ, ಹೊಂದಾಣಿಕೆ ಶಕ್ತಿ, ಧೈರ್ಯ ಶಕ್ತಿ, ನಿರ್ಣಯ ಶಕ್ತಿ, ಇಚ್ಚ ಶಕ್ತಿ, ಶಾಂತಿಯ ಶಕ್ತಿ ಅತ್ಯವಶ್ಯಕ ಈ ಶಕ್ತಿಗಳ ಕೊರತೆಯಿಂದಲೇ ಮನುಷ್ಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾನೆ ಶಿವಾಧ್ಯಾನದಿಂದ ಈ ಶಕ್ತಿಗಳನ್ನು ಪಡೆಯಲು ಸಾಧ್ಯ ಎಂದರು.

ದಸರಾ ಪ್ರಯುಕ್ತ “ಮನಶಾಂತಿಗಾಗಿ ಶಿವಧ್ಯಾನ ಶಿಬಿರ” ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ೭ ರಿಂದ ೮ ಗಂಟೆವರೆಗೆ ಏರ್ಪಡಿಸಲಾಗಿದೆ ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ “ಚೈತನ್ಯ ದೇವಿಯ ರೂಪಕ” ಜನರನ್ನು ಆಕರ್ಷಿತಗೊಳಿಸಿತು ಹರ್ಷ ಲೋಕಕ್ಕೆ ಕರೆದೊಯಿತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಉಪಾಧ್ಯಕ್ಷರಾದ ನಾರಾಯಣ ಕುರುಗೋಡು ಕಾರ್ಯದರ್ಶಿ ಮಲ್ಲಿಕಾರ್ಜುನ್ ಜಾನೆಕಲ್, ಶಂಕರ್ ಜನಾದ್ರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!