
ಅ0ಗವಿಕಲರ ಪ್ರತಿಭೆ, ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಬೇಕು : ಡಿಸಿ ದಿವಾಕರ್
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- ಅಂಗವಿಕಲರನ್ನು ಗೌರವದಿಂದ ಕಾಣುತ್ತಾ, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ ಎಲ್ಲರ ಸಮಾನತೆ ಮತ್ತು ಒಳಗೊಳ್ಳುವಿಕೆಯ ಮೂಲಕ ನಿಜವಾದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಕಾರ್ಯಕ್ರಮ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕಲಚೇತನರ ಸ್ವ-ಸಹಾಯ ಸಂಘಗಳು ವಿಕಲಚೇತನರಿಗೆ ಸಮುದಾಯ ಆಧಾರಿತ ಸಹಾಯ ವ್ಯವಸ್ಥೆ ಒದಗಿಸುವ ಪ್ರಮುಖ ತಾಣಗಳಾಗಿವೆ. ಹಾಗೂ ವಿಕಲಚೇತನರ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ. ಜಿಲ್ಲೆಯಲ್ಲಿ ಒಟ್ಟು ೧೦೭ ವಿಕಲಚೇತನರ ಸ್ವ-ಸಹಾಯ ಸಂಘಗಳಿದ್ದು, ಅವುಗಳಲ್ಲಿ ೭೫ ಸಂಘಗಳು ಬ್ಯಾಂಕ್ ಖಾತೆ ಹೊಂದಿವೆ, ಇನ್ನುಳಿದ ಸಂಘಗಳು ಅಗತ್ಯ ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ತೆರೆಯಬೇಕು ಎಂದು ಸೂಚನೆ ನೀಡಿದರು.
ಸ್ವ-ಸಹಾಯ ಸಂಘಗಳು ಎನ್.ಆರ್.ಎಲ್.ಎಂ. ನಲ್ಲಿ ನೊಂದಣಿ ಮಾಡಿಸಿದರೆ ಸಂಘಗಳಿಗೆ ಅಗತ್ಯ ಸಾಲ, ಸೌಲಭ್ಯ ದೊರೆಯುತ್ತದೆ. ಜಿಲ್ಲೆಯಲ್ಲಿನ ಸಂಘಗಳ ಪೈಕಿ ೫೧ ಸಂಘಗಳು ಮಾತ್ರ ನೊಂದಣಿ ಮಾಡಿಸಿಕೊಂಡಿವೆ, ಉಳಿದ ಸಂಘಗಳು ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.
ಅAಗವಿಕಲರು ಪಡಿತರ ಚೀಟಿಯಿಂದ ವಂಚಿತರಾಗಬಾರದು, ಯಾರಿಗೆ ಪಡಿತರ ಚೀಟಿ ಇಲ್ಲವೋ ಅಂತವರಿಗೆ ತಕ್ಷಣ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಪಡಿತರ ಚೀಟಿ ಮಾಡಿಸಿಕೊಡಬೇಕು ಎಂದು ಎಂ.ಆರ್.ಡಬ್ಲೂö್ಯ ಹಾಗೂ ವಿ.ಆರ್.ಡ ಬ್ಲೂö್ಯಗಳಿಗೆ ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ್ ಲಿಂಗ .ಎಸ್ ಗೋಟಕಿಂಡಿ ಅವರು ಮಾತನಾಡಿ, ಡಿಸೆಂಬರ್ ೩ ರಂದು ನಡೆಯುವ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಲಕಚೇತನರಿಗೆ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರ ಚಟವಟಿಕೆಗಳನ್ನು ಮಾಡಿಸಿ ಅವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಅದಕ್ಕೆ ಬೇಕಾಗುವ ವಿವಿಧ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.
ವಿಲಕವಚೇತನರ ದಿನಾಚರಣೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಅಧಿಕರಿಗಳಿಗೆ. ಮತ್ತು ಅಂದು ಅಂಗವಿಕಲತರನ್ನು ವಿವಿಧ ಗ್ರಾಮಗಳಿಂದ ಜಿಲ್ಲಾ ಕೇಂದ್ರಕ್ಕೆ ಕರೆತರಲು ವಾಹನ ಸೌಲಭ್ಯ ಒದಗಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ದಿನಾಚರಣೆಯ ವೇಳೆ ಹೆಚ್ಚಾಗಿ ವಿಲಕಚೇತನರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಅಂಗವಿಕಲರ ಪೈಕಿ ಕೆಲವರು ಮಾತನಾಡಿ, ಸಾಲ ನೀಡುವುದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ, ಕೆಲವು ಕಡೆ ಬ್ಯಾಂಕ್ ಶಾಖೆಗಳಿಲ್ಲ, ಗ್ರಾಮ ಪಂಚಾಯಿತಿಗಳಲ್ಲಿನ ಅನುದಾನ ಸರಿಯಾಗಿ ಹಂಚಿಕೆ ಆಗುತ್ತಿಲ್ಲ ಹಾಗೂ ಧ್ವನಿ ಮತ್ತು ಶ್ರವಣಧೋಷ ಹೊಂದಿದವರಿಗೆ ಸರ್ಕಾರಿ ಕಚೇರಿಗಳಲ್ಲಿ ಸಂವಹನ ನಡೆಸಲು ಅನುಕೂಲವಾಗುವಂತೆ ಅಧಿಕಾರಿಗಳಗೆ ಒಂದು ವಾರದ ಮಟ್ಟಿಗೆ ಸಂಕೇತ ಭಾಷೆಯ ತರಬೇತಿ ನೀಡಬೇಕು ಎಂದು ಜಿಲ್ಲಾದಿಕಾರಿಗಳಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳು ಅಂಗವಿಕಲರಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಡೆ ವಿನಿಯೋಗ ಮಾಡಲು ಬರುವುದಿಲ್ಲ. ಬಂದ ಅನುದಾನವನ್ನು ಅವಶ್ಯಕತೆ ಅನುಗಣವಾಗಿ ಅಂಗವಿಕಲರ ಸಬಲೀಕರಣಕ್ಕೆ ಬಳಸಿಕೊಳ್ಳಲಾಗುವುದು, ಮುಂಬರುವ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳಿಗೆ ಸಂಕೇತ ಭಾಷೆಯ ತರಬೇತಿ ನೀಡಲಾಗುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷ, ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಹಾಗೂ ವಿವಿಧ ಅಧಿಕಾರಿಗಳು ಮತ್ತು ಎಂಅರ್‌ಡಬ್ಲ್ಯೂ, ವಿಅರ್‌ಡಬ್ಲ್ಯೂ ಹಾಗೂ ವಿಲಕಚೇನರು ಉಪಸ್ಥಿರಿದ್ದರು.