
ರಾರಾವಿ : ಹತ್ತಿ ಗಿಡದ ಎಲೆಗಳನ್ನು ತಿಂದ 8 ಕುರಿಗಳ ಸಾವು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ತಾಲೂಕು ರಾರಾವಿ ಗ್ರಾಮದಲ್ಲಿ ಹತ್ತಿ ಗಿಡದ ಎಲೆಗಳನ್ನು ತಿಂದು ೮ ಕುರಿಗಳು ಸಾವಿಗೀಡಾಗಿವೆ ರೈತರು ಹತ್ತಿ ಗಿಡದ ಇಳುವರಿ ಪಡೆದ ನಂತರ ಕುರಿಗಳನ್ನು ಹೊಲದಲ್ಲಿ ಮೇಯಿಸುವದು ಸಾಮಾನ್ಯವಾಗಿದೆ ಆದರೆ ಹತ್ತಿ ಗಿಡದಲ್ಲಿ ಉಳಿದ ವಿಷವು ಹತ್ತಿಯ ಎಲೆಗಳನ್ನು ತಿನ್ನುವ ಕುರಿಗಳ ಪಾಲಿಗೆ ಯಮ ಪಾಶವಾಗಿದೆ.
ಈ ವಿಷಭಾದೆಗೆ ತುತ್ತದ ಕುರಿಗಳು ಉಸಿರಾಟ ತೊಂದರೆ ಕೆಂಪು ಮೂತ್ರ ರಕ್ತ ಮಿಶ್ರಿತ ಭೇದಿ ಅಜೀರ್ಣವಾಗಿ ನಿತ್ರಾಣವಾಗಿ ಮರಣಿಸುತ್ತವೆ ಹಲವು ಬಾರಿ ಯಾವುದೇ ಲಕ್ಷಣಗಳನ್ನು ತೋರಿಸದೆ ಇದ್ದಕ್ಕಿದ್ದ ಹಾಗೆ ಸತ್ತು ಹೋಗುತ್ತವೆ ಈ ವಿಷಭಾದೆಯು ದನ, ಕುರಿ, ಮೇಕೆ, ಕೋಳಿ, ಹಂದಿಗಳಲ್ಲಿ ಕಂಡುಬರುತ್ತದೆ.
ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಕುರಿಗಾರ ಎಲ್ಲಪ್ಪ ಎಂಬುವವರ ಕುರಿ ಹಿಂಡಿನಲ್ಲಿ ಇದ್ದಕ್ಕಿದ್ದ ಹಾಗೆ ಐದಾರು ದಿನಗಳ ಹೊತ್ತಿಗೆ ಸುಮಾರು ೮ ಕುರಿಗಳು ಮರಣ ಹೊಂದಿದ್ದವು ಸಿರುಗುಪ್ಪ ತಾಲೂಕಿನ ಪಶು ವೈದ್ಯರನ್ನು ಕುರಿಗಾರ ಸಂಪರ್ಕಿಸಿದಾಗ ಕೂಲಂಕುಶವಾಗಿ ಮಾಹಿತಿ ಪಡೆದ ವೈದ್ಯರ ತಂಡ ಕುರಿ ಹಿಂಡಿಗೆ ಭೇಟಿ ನೀಡಿ ಸಮಗ್ರವಾಗಿ ತಪಾಸಣೆ ಮಾಡಿ ಮರಣ್ಣೋತ್ತರ ಪರೀಕ್ಷೆ ನಡೆಸಿದಾಗ ಗಾಸಿಪಲ್ ವಿಷಭಾದೆಯಿಂದ ಕುರಿಗಳು ಮೃತ ಪಟ್ಟಿರುವುದು ದೃಢ ಪಟ್ಟಿರುತ್ತದೆ.
ಹೆಚ್ಚಿನ ರೋಗ ತನಿಖೆಗೆ ಜೀವಂತ ಕುರಿಗಳ ರಕ್ತದ ಮಾದರಿಯನ್ನು ಬಳ್ಳಾರಿ ಜಿಲ್ಲೆಯ ಪಶು ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವಿಷಭಾದೆಗೆ ತುತ್ತಾದ ಕುರಿಗಳಿಗೆ ಚಿಕಿತ್ಸೆ ನೀಡಿ ಸಾವಾದ ಕುರಿಗಳ ಮಾಹಿತಿಯನ್ನು ಸರ್ಕಾರದ ಕುರಿಗಾಗಿ ಅನುಗ್ರಹ ಯೋಜನೆಯ ಸಹಾಯ ಧನಕ್ಕಾಗಿ ವರದಿಯನ್ನು ಕಳುಹಿಸಿ ಕೊಡಲಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ.ಮಸಿಯಣ್ಣ ಅರನಕಟ್ಟೆ ಅವರು ತಿಳಿಸಿದರು.