
ಅಪಘಾತ ಪರಿಹಾರ ನಿಡುವಲ್ಲಿ ವಿಳಂಬ : ಬಸ್ ಜಪ್ತಿಗೆನ್ಯಾಯಾಧೀಶ ಆದೇಶ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 24- ಅಪಘಾತ ಪರಿಹಾರ ನಿಡುವಲ್ಲಿ ಕೆಎಸ್‌ಆರ್‌ಟಿಸಿ ವಿಳಂಬ ನೀತಿ ನಗರದ ಸಿವಿಲ್ ಮತ್ತು ಜೆಎಫ್.ಎಂಸಿ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ ಗಾಣಿಗೇರ ಬಸ್ ಜಪ್ತಿಗೆ ಆದೇಶ ನೀಡಿದ್ದಾರೆ ಎಂದು ಮೃತರ ಪರ ವಾದ ಮಂಡಿಸಿದ ವಕೀಲ ಗೋವಿಂದ ತಿಳಿಸಿದ್ದಾರೆ.
೨೦೧೮ರಲ್ಲಿ ಸಿಂಧನೂರ ತಾಲೂಕಿನ ಬಾದಲವಾಡ ಕ್ಯಾಂಪ ನವಿನಕುಮಾರ ಎಂಬ ವ್ಯಕ್ತಿ ಬಸ್ ಅಪಘಾತಕ್ಕೆ ಮೃತನಾಗಿದ್ದ ಅವರ ಪತ್ನಿ ಸ್ವಪ್ನ ಪರಿಹಾರಕ್ಕಾಗಿ ನ್ಯಾಯಾಲಯದ ಮೋರೆ ಹೋಗಿದ್ದಳು.
ನ್ಯಾಯಾಧೀಶರಾದ ರಮೇಶ ಗಾಣಿಗೇರ ೩೩ಲಕ್ಷ೪೨ ಸಾವಿರ ಪರಿಹಾರ ನಿಡುವಂತೆ ಆದೇಶ ವಿತ್ತಿದ್ದರು.
ಕಲ್ಬುರ್ಗಿ ವಿಭಾಗದ ಎನ್‌ಇಕೆಎಸ್‌ಆರ್‌ಟಿಸಿ ಬಸನ್ನು ಗಂಗಾವತಿ ಬಸ್ ನಿಲ್ದಾಣ ಕ್ಕೆ ಹೋಗಿ ಜಪ್ತಿ ಮಾಡಿಕೋಂಡು ಬರಲಾಗಿದೆ ಎಂದು ವಕೀಲ ಗೋವಿಂದ ತಿಳಿಸಿದ್ದಾರೆ.