
ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಸೇವಾ ಬಡ್ತಿ ನೀಡಲು ಆಗ್ರಹ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿರುಗುಪ್ಪ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೆದಾರ್ ಸಿದ್ದಾರ್ಥ ಕಾರಂಜಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ವೈ ಹನುಮನ ಗೌಡ ಮಾತನಾಡಿ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯಿಸಬಾರದು 2016ಕ್ಕಿಂತ ಮೊದಲು ನೇಮಕವಾಗಿ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜ್ಯೇ ಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮ ನೀಡಬೇಕು ಮೂಲಕ 1ರಿಂದ 7 ಅಥವಾ 8ಕ್ಕೆ ನೇಮಕ ಹೊಂದಿದವರನ್ನು ಪಿ ಎಸ್ ಟಿ ಎಂದು ಪಧನಾಮ ಒಂದರಿಂದ ಐದನೇ ತರಗತಿಗೆ ಸೀಮಿತಗೊಳಿಸಿದ ಆದೇಶ ಹಿಂಪಡೆಯಬೇಕು ವಿದ್ಯಾರ್ಹತೆ ಪೂರೈಸಿ 2016ರಕ್ಕಿಂತ ಮೊದಲು ನೇಮಕವಾದ ಎಲ್ಲಾ ಪ್ರಾಥಮಿಕ ಶಿಕ್ಷಕರನ್ನು ಪ್ರೌಢಶಾಲೆಗೆ ಭರ್ತಿ ನೀಡಬೇಕು ಅಲ್ಲದೆ ಮುಖ್ಯ ಶಿಕ್ಷಕ ಹಾಗೂ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಸೇವಾ ಜ್ಯೇಷ್ಠತೆಯ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕ ಅಧ್ಯಕ್ಷ ಹೆಚ್ ಜೆ ಶ್ರೀಧರ ಉಪಾಧ್ಯಕ್ಷ ನಾಗರತ್ನಮ್ಮ ಜಿಲ್ಲಾ ಖಜಂಚಿ ಎಂ ಬಸವನಗೌಡ ಜಿಲ್ಲಾ ಸಹ ಕಾರ್ಯದರ್ಶಿ ಎಚ್ ಎಂ ಗೀತಾ ಗ್ರೇಡ್ -2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಬಿ ಈರಣ್ಣ ಇತರರು ಇದ್ದರು.