2c136fae-be38-4577-97e1-318669006cc9

27 ರಿಂದ ದಂತ ವೈದ್ಯರ ರಾಜ್ಯ ಮಟ್ಟದ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ

ಕರುನಾಡೆ ಬೆಳಗು ಸುದ್ದಿ

ಬಳ್ಳಾರಿ, 24- ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡು ಈ ತಿಂಗಳ 27 ಮತ್ತು 28 ರಂದು ಗಣಿನಾಡು ಬಳ್ಳಾರಿ ನಗರದಲ್ಲಿ ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟಂನ್ ಪಂದ್ಯಾವಳಿ ಹಮ್ಮಿಕೊಂಡಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಡಾ. ಮಧುಸೂಧನರೆಡ್ಡಿ ತಿಳಿಸಿದ್ದಾರೆ.

ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ಇದನ್ನು ಆಯೋಜಿಸಿದೆ. ನಾಕೌಟ ಹಂತದಲ್ಲಿ ಪಂದ್ಯಗಳು ನಡೆಯಲಿವೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ 35 ಕ್ಕೂ ಹೆಚ್ಚು ಕ್ರೀಡಾಪಟುಗಳು ನೋಂದಣಿಯಾಗಿದ್ದಾರೆ.

40 ವರ್ಷಕ್ಕೆ ಕೆಳ ಮಟ್ಟದ ಮತ್ತು ನಂತರದ ಪುರಷ ಮತ್ತು ಮಹಿಳಾ ವಿಭಾಗದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಅಲ್ಲದೆ ಮಿಕ್ಸ್ ಡಬಲ್ಸ್ ಪಂದ್ಯಗಳು ನಡೆಯಲಿವೆ.

ಜು.27 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಪಂದ್ಯಾವಳಿ ಉದ್ಘಾಟನೆ ಮಾಡಲಿದ್ದು. ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಡಾ.ಭರತ್ ಎಸ್.ವಿ. ಸ್ಥಳೀಯ ದಂತಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಹೆಚ್. ಹಿರಿಯ ದಂತ ವೈದ್ಯರಾದ ಡಾ.ಶೇಷಗಿರಿರಾವ್, ಡಾ.ದಿವಾಕರ್ ಎಸ್. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜು.28 ರಂದು ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು ವಿಜೇತರಿಗೆ ನಗರದ ಶಾಸಕ ನಾರಾ ಭರತ್ ರೆಡ್ಡಿ ಟ್ರೋಪಿಗಳನ್ನು ವಿತರಿಸಲಿದ್ದಾರೆ.

ಬಿಮ್ಸ್ ನಿರ್ದೇಶಕ ಡಾ. ಟಿ. ಗಂಗಾಧರಗೌಡ, ಎಸ್ಪಿ ಶೋಭಾರಾಣಿ ಜೆ.ವಿ, ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಡಾ. ಮಹೇಶ್ಚಂದ್ರ ಕೆ, ಖಜಾಂಚಿ ಡಾ. ಸಂಜಯ್ ಕುಮಾರ್ ಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ. ಅಲ್ಲದೆ ಜಿಲ್ಲಾ ಅಸೋಸಿಯೇಷನ್ ನ ಎಲ್ಲಾ ಪದಾಧಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!