
ದಂತ ವೈದ್ಯರ ರಾಜ್ಯ ಮಟ್ಟದ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 27- ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡಿರುವ ಎರೆಡು ದಿನಗಳ ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟಂನ್ ಪಂದ್ಯಾವಳಿ ಇಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ಆರಂಭಗೊಂಡಿದೆ.
ದಂತ ವೈದ್ಯಕೀಯ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಡಾ.ಭರತ್ ಎಸ್.ವಿ. ಇವರು ಪಂದ್ಯಾವಳಿಗೆ ಚಾಲನೆ ನೀಡಿ ಎಲ್ಲರೂ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಹೊಂದಬೇಕು ಎಂದರು.
ನಾಕೌಟ ಹಂತದಲ್ಲಿ ಪಂದ್ಯಗಳು ನಡೆಯುತ್ತಿವೆ. ಲ ರಾಜ್ಯದ ವಿವಿಧ ಜಿಲ್ಲೆಗಳಿಂದ 58 ಕ್ರೀಡಾಪಟುಗಳು ಆಗಮಿಸಿದ್ದಾರೆ.
40 ವರ್ಷಕ್ಕೆ ಕೆಳ ಮಟ್ಟದ ಮತ್ತು ನಂತರದ ಪುರಷ ಮತ್ತು ಮಹಿಳಾ ವಿಭಾಗದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಅಲ್ಲದೆ ಮಿಕ್ಸ್ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.
ಭಾರತೀಯ ದಂತ ಪರಿಷತ್ತಿನ ರಾಜ್ಯ ಸದಸ್ಯ ಡಾ.ಶಿವಶರಣ್ ಶೆಟ್ಟಿ, ರಾಜ್ಯ ಮತ್ತು ರಾಷ್ಟ್ರದ ಮಾಜಿ ಚಾಂಪಿಯನ್ ಡಾ.ರಾಧಿಕ ಆಚಾರ್ಯ, ಸ್ಥಳೀಯ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಎಸ್.ಹೆಚ್. ಹಿರಿಯ ದಂತ ವೈದ್ಯರಾದ ಡಾ.ಶೇಷಗಿರಿರಾವ್, ಡಾ.ದಿವಾಕರ್ ಎಸ್. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಜಿಲ್ಲಾ ಅಧ್ಯಕ್ಷ ಡಾ. ಮಧುಸೂಧನರೆಡ್ಡಿ, ಕಾರ್ಯದರ್ಶಿ ಡಾ.ಶ್ರೀಧರ್, ಖಜಾಂಚಿ ಡಾ.ರಾಜೀವ್, ರಾಜ್ಯ ಪ್ರತಿನಿಧಿ ಡಾ. ಮಂಜುನಾಥ ಮತ್ತಿತರ ಪದಾಧಿಕಾರಿಗಳು ಇದ್ದರು.
ನಾಳೆ ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದ್ದು ವಿಜೇತರಿಗೆ ನಗರದ ಶಾಸಕ ನಾರಾ ಭರತ್ ರೆಡ್ಡಿ ಟ್ರೋಪಿಗಳನ್ನು ವಿತರಿಸಲಿದ್ದಾರೆ.
ಬಿಮ್ಸ್ ನಿರ್ದೇಶಕ ಡಾ. ಟಿ. ಗಂಗಾಧರಗೌಡ, ಎಸ್ಪಿ ಶೋಭಾರಾಣಿ ಜೆ.ವಿ, ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಡಾ. ಮಹೇಶ್ಚಂದ್ರ ಕೆ, ಖಜಾಂಚಿ ಡಾ. ಸಂಜಯ್ ಕುಮಾರ್ ಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ. ಅಲ್ಲದೆ ಜಿಲ್ಲಾ ಅಸೋಸಿಯೇಷನ್ ನ ಎಲ್ಲಾ ಪದಾಧಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ.