
ದೇಶನೂರು : ಮೊಸಳೆ ಪ್ರತ್ಯಕ್ಷ ಅರಣ್ಯ ಅಧಿಕಾರಿಗಳಿಂದ ರಕ್ಷಣಾ ಕಾರ್ಯಾ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 10- ತಾಲೂಕು ದೇಶನೂರು ಗ್ರಾಮದ ರೈತರದ ಶರೀಫ್ ಸಾಹೇಬ್ ಅವರ ಹೊಲದ ಬಾವಿಯಲ್ಲಿ ಮೊಸಳೆ ಬಂದು ಸೇರಿಕೊಂಡಿತ್ತು ಆತಂಕದಲ್ಲಿದ್ದ ಕುಟುಂಬಕ್ಕೆ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ತುಂಗಾ ಭದ್ರಾ ನದಿಗೆ ಬಿಡುವ ಮೂಲಕ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಮಾಹಿತಿ ಪಡೆದು ಅರಣ್ಯ ಇಲಾಖೆಯ ಫಾರೆಸ್ಟರ್ ಅಂಬಣ್ಣ ನಾಯಕರಿಗೆ ತಿಳಿಸಿ ರಕ್ಷಣೆ ಕೋರಿದ್ದಾರೆ ಮಾಹಿತಿ ತಿಳಿಯುತ್ತಿದ್ದಂತೆ ಅಂಬಣ್ಣ ಅವರು ಹಳೆಕೋಟೆ ಗ್ರಾಮದ ವೇಷಗಾರ ಮಲ್ಲಯ್ಯನಿಗೆ ಕರೆ ಮಾಡಿ ದೇಶನೂರಿಗೆ ತೆರಳಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿದ್ದ ಮೊಸಳೆಯನ್ನು ಮೇಲೆಳಿದು ನಂತರ ತುಂಗಭದ್ರ ನದಿಗೆ ಬಿಟ್ಟಿದ್ದಾರೆ.
ಇದರಿಂದ ರೈತ ಕುಟುಂಬದ ಚಿಂತೆ ದೂರಾಗಿದೆ ಸಿರುಗುಪ್ಪ ತಾಲೂಕಿನ ಹಳೆಕೋಟೆ ಗ್ರಾಮದ ವೇಷಗಾರ ಮಲ್ಲಯ್ಯ ಈಗಾಗಲೇ ಬರೀ ಗೈಲಿ ಮೊಸಳೆ ಹಿಡಿಯುವಲ್ಲಿ ಸ್ಪೆಷಲಿಸ್ಟ್ ಆಗಿದ್ದಾರೆ ಎಂತಹ ಮೊಸಳೆ ಏನಾಗಲಿ ಚಾಕ ಚಕ್ಯತೆಯಿಂದ ಹಿಡಿಯುತ್ತಾನೆ ಈಗಾಗಲೇ ಆರು ವರ್ಷಗಳಿಂದ ನೂರಾರು ಮೊಸಳೆಗಳನ್ನು ಹಿಡಿದಿದ್ದಾನೆ ಎನ್ನಲಾಗಿದೆ.