6

ವಾಲ್ಮೀಕಿ ಆದರ್ಶಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ದೇವಪ್ಪ ವಾಲ್ಮೀಕಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 7- ವಾಲ್ಮೀಕಿ ಮಹರ್ಷಿಗಳು ದೇಶದ ಮೊದಲ ಕವಿ ರಾಮಾಯಣ ಕಾವ್ಯ ರಚಿಸಿ ದೇಶದ ಎಲ್ಲರ ಅಚ್ಚುಮೆಚ್ಚಿನ ಕವಿ ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೂಂಡು ಹೋಗಬೇಕು ಎಂದು ಶಿಕ್ಷಕ ದೇವಪ್ಪ ವಾಲ್ಮೀಕಿ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.

ಮಹರ್ಷಿ ವಾಲ್ಮೀಕಿ ಸಮುದಾಯ ಭವನದಿಂದ ಮೇರವಣಿಗೆ ಪ್ರಾರಂಭಗೊAಡು ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿ ವೃತ್ತ ಮತ್ತು ಹುತ್ತಕ್ಕೆ ಪೂಜೆ ಸಲ್ಲಿಸಲಾಯಿತು.

ಮೇರವಣಿಗಲ್ಲಿ ಕನ್ನಡಾಂಬೆಯ ಭಾವಚಿತ್ರ ಹಾಗೂ ಮಹರ್ಷಿ ವಾಲ್ಮೀಕಿಯ ಭಾವಚಿತ್ರ ಮೇರವಣಿಗೆ ಮಾಡಲಾಯಿತು ಮೇರವಣಿಗೆಯಲ್ಲಿ ಮಹಿಳೆಯರು ಕುಂಬ ಕಳಸ ಹಿಡಿದು ಸಾಗಿದರು.

ಮೇರವಣಿಗೆಯ ನಂತರ ಸಭೆ ಉದ್ದೇಶಿಸಿ ಮಾತನಾಡಿದ ಮುಖ್ಯಶಿಕ್ಷಕ ದೇವಪ್ಪ ವಾಲ್ಮೀಕಿ ಮಾತನಾಡಿ, ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ ಇತ್ತು. ರಾಮಾಯಣ ಎಂಬ ಮಹಾಕಾವ್ಯವು ಇವರ ಕವಿತ್ವ ಭಾವನೆಯ ಕೊಡುಗೆಯಾಗಿದೆ. ಭ್ರಾತೃತ್ವ ಭಾವನೆ, ರಾಜನೀತಿ, ಮನೋಧರ್ಮ, ಮಾನವೀಯ ಮೌಲ್ಯ,ಪ್ರಜಾಪ್ರಭುತ್ವ ರಾಮಾಯಣ ಮಹಾಕಾವ್ಯವು ಪರಿಚಯಿಸಿದೆ ವಿಶ್ವಕ್ಕೆ ರಾಮಾಯಣ ಎಂಬ ಮಹಾ ಕಾವ್ಯವನ್ನ ನೀಡಿದ್ದಾರೆ. ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದಾರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿವೆ. ಲವ-ಕುಶರಿಗೆ ಗುರುವಾಗಿದ್ದವರು ವಾಲ್ಮೀಕಿರವರ ತತ್ವಾದರ್ಶಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದರು.

ಈ ಕಾರ್ಯಕ್ರಮದಲ್ಲಿ ಪ್ರಭುಗೌಡ ಪೋಲೀಸ್ ಪಾಟೀಲ್,ಫಕೀರಗೌಡ ಮಾಲಿ ಪಾಟೀಲ್, ಹನಮಗೌಡ ಮಾಲಿ ಪಾಟೀಲ್, ಭೀಮೇಶ ತಳವಾರ, ರಾಘವೇಂದ್ರ ಮಾಲಿ ಪಾಟೀಲ್, ಹನಮೇಶ ಮಾಲಿ ಪಾಟೀಲ್, ಹನಮೇಶ ಪೂಜಾರ,ಹುಚ್ಚಿರಪ್ಪ ಪೂಜಾರ ಮಂಜುನಾಥ ಬ್ಯಾಳಿ,ಸುರೇಶಗೌಡ ಮಾಲಿ ಪಾಟೀಲ್, ವೀರನಗೌಡ ಮಾಲಿ ಪಾಟೀಲ್, ಶಿವಕುಮಾರ ಬಡಗಿ,ಹನಮಂತಪ್ಪ ತಳವಾರ, ದ್ಯಾಮಣ್ಣ ಪೂಜಾರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!