3

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ನವಣೆ ಬೀಜ ವಿತರಣೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ತಾಲೂಕಿನ ಹಿರೇ ವಂಕಲಕುಂಟಾ ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ನವಣೆ ಬಿತ್ತನೆ ಮಾಡಿದ ಅನ್ನದಾತರಿಗೆ ಸಾವಯವ ಗೊಬ್ಬರ ಕೀಟನಾಶಕ, ಜೈವಿಕ ಶೀಲಿಂಧ್ರನಾಶಕ, ಸೂಕ್ಷ್ಮ ಪೋಷಕಾಂಶ ಉಚಿತವಾಗಿ ಗುರುವಾರ ವಿತರಿಸಲಾಯಿತು.

ರೈತ ಸಂಪರ್ಕದ ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಮಾತನಾಡಿ, ಮಸಾರಿ ಭಾಗದಲ್ಲಿ ನವಣೆ ಬಿತ್ತನೆ ಮಾಡಿದ ಅನ್ನದಾತರು ಈಗಾಗಲೇ ಉತ್ತಮ ಫಸಲು ಬರುವ ನಿಟ್ಟಿನಲ್ಲಿ ಸಕಾಲಕ್ಕೆ ಗೊಬ್ಬರ ಹಾಕುವ ಮೂಲಕ ಚೆನ್ನಾಗಿ ಪೈರು ಪಡೆಯಲು ಸಾಧ್ಯ. ಹೀಗಾಗಿ ಈ ಭಾಗದಲ್ಲಿ ರೈತಾಪಿ ವರ್ಗಕ್ಕೆ ನೆರವಾಗಲು ಬೆಳೆಗಳನ್ನು ಸರಿಯಾಗಿ ಪಡೆಯಲು ಗೊಬ್ಬರ ಪೋಷಕಾಂಶವನ್ನು ನೀಡಲಾಗಿದೆ. ಸರಕಾರದಿಂದ ರೈತರಿಗೆ ದೊರಯುವ ಯೋಜನೆಗಳನ್ನು ಸಕಾಲಕ್ಕೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಈ ವೇಳೆಯಲ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದ್ಯಾಮನಗೌಡ ಕರಿಗೌಡರ, ಸಿಬ್ಬಂದಿಗಳಾದ ಕಿರಣಕುಮಾರ, ಮಹಾಬಳೇಶ ಚಿಣಗಿ, ರೈತ ಮುಖಂಡರಾದ ಪರಶುರಾಮ ಹರಿಜನ, ಮರಿಸ್ವಾಮಿ ಹರಿಜನ, ಯಮನಪ್ಪ ಹಿರೇವಡ್ರಕಲ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!